ಶಿವಮೊಗ್ಗವನ್ನು ಬ್ರ್ಯಾಂಡ್ ಮಾಡಲು ವಿವಿಧ ಸ್ಪರ್ಧೆ

shimogga zp ceo N.Hemanth
Published on

ಶಿವಮೊಗ್ಗ: ಪ್ರವಾಸೋದ್ಯಮದಲ್ಲಿ ಶಿವಮೊಗ್ಗವನ್ನು ಬ್ರ್ಯಾಂಡ್ ಮಾಡಲು ವಿಡಿಯೋಗ್ರಫಿ, ಫೋಟೋಗ್ರಫಿ, ರೀಲ್ಸ್, ಲೋಗೋ ವಿನ್ಯಾಸ ಮತ್ತು ಪ್ರವಾಸೋದ್ಯಮ ಟ್ಯಾಗ್ಲೈನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ತಿಳಿಸಿದರು.

ಆ.11ರಿಂದ 20ರೊಳಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ. ಸ್ಪರ್ಧಿಗಳಿಗೆ ಗುರುತಿನ ಚೀಟಿ ನೀಡಲಾಗುವುದು. ಸಮಿತಿ ನಿರ್ಣಯದಂತೆ ವಿಜೇತರನ್ನು ಆಯ್ಕೆ ಮಾಡಲಾಗುವುದು. ಜಾಲತಾಣದಲ್ಲಿ ಅಪರೂಪದ ಜಿಲ್ಲೆಯ ವಿಶೇಷಗಳಿರುವ ಛಾಯಾಚಿತ್ರ ಪ್ರದರ್ಶಿಸಲಾಗುವುದು. ಸ್ಪರ್ಧೆಗೆ ಬಂದ ಆಯ್ದ ಉತ್ತಮ ಛಾಯಾಚಿತ್ರಗಳನ್ನು ವೆಬ್‌ಸೈಟ್‌ಗೆ ಬಳಸಿಕೊಳ್ಳಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಕ್ರೀಡೆ-ಸಾಹಸಕ್ಕೆ ಮಹತ್ವ ಪಡೆದುಕೊಂಡಿದೆ. ಇಲ್ಲಿನ ಹಲವು ಕಡಿದಾದ ಕಣಿವೆಗಳು, ಜಲಪಾತಗಳು, ರೋಮಾಂಚಕ ಸಾಹಸ-ಕ್ರೀಡೆಗಳಿಗೆ ಅವಕಾಶಗಳಿವೆ. ಪ್ರವಾಸಿ ತಾಣಗಳು, ಮಂದಿರ, ಮಸೀದಿ, ಚರ್ಚ್‌ಗಳು, ಐತಿಹಾಸಿಕ ಸ್ಥಳಗಳು, ನದಿ, ನಾಲೆ, ಕವಿಗಳು, ಸಾಹಿತ್ಯ, ಜಲಪಾತಗಳು, ತಪ್ಪಲು ಪ್ರದೇಶಗಳು ಮತ್ತಿತರ ವಿವರಗಳನ್ನು ಸಚಿತ್ರವಾಗಿ ಸಾಮಾಜಿಕ ಜಾಲತಾಣಗಳು ಮತ್ತಿತರ ಪ್ರಸಾರ ಮಾಧ್ಯಮಗಳನ್ನು ಬಳಸಿಕೊಂಡು ಜಗತ್ತಿನಾದ್ಯಂತ ಪರಿಚಯಿಸಲಾಗುವುದು. ಅದಕ್ಕಾಗಿ ವೆಬ್‌ಸೈಟ್ ವಿನ್ಯಾಸಗೊಳಿಸಿ ಸೆ.27ರಂದು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net