ಚಂದ್ರಗುತ್ತಿಯಲ್ಲಿ ವರಮಹಾಲಕ್ಷ್ಮೀ ವಿಶೇಷ

17sor3
ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಪ್ರಮೀಳಾ ಕುಮಾರಿ, ಅರವಿಂದ ಭಟ್, ಶಶಿಕಲಾ ಇತರರಿದ್ದರು.
Published on

ಸೊರಬ: ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಶುಕ್ರವಾರ ಮುತ್ತೈದೆಯರಿಗೆ ಉಡಿ ತುಂಬಲಾಯಿತು.

ಧಾರ್ಮಿಕ ದತ್ತಿ ಇಲಾಖೆ ಆದೇಶದನ್ವಯ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಗಮಿಸಿದ ಮುತ್ತೈದೆಯರಿಗೆ ಪ್ರಸಾದ ರೂಪದಲ್ಲಿ ಅರಿಶಿಣ, ಕುಂಕುಮ ಮತ್ತು ಬಳೆಗಳನ್ನು ಬಾಗಿನ ನೀಡಲಾಯಿತು.
ಹಿರೇಕೆರೂರು, ಹಾವೇರಿ, ಹಾನಗಲ್, ಶಿಕಾರಿಪುರ, ಹುಬ್ಬಳ್ಳಿ, ಧಾರವಾಡ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮೀಳಾಕುಮಾರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕ ಅರವಿಂದ್ ಭಟ್ ಪೂಜೆ ನೆರವೇರಿಸಿದರು. ದೇವಸ್ಥಾನದ ಸಿಬ್ಬಂದಿ ಶಶಿಕಲಾ, ಸಮಿತಿ ಮಾಜಿ ಸದ್ಯಸರಾದ ಎಂ.ಲಲಿತಾ, ಪ್ರತಿಮಾ ಶೇಟ್, ರೇಣುಕಮ್ಮ, ಶೋಭಾ, ಪದ್ಮಾವತಿ, ರತ್ನ, ತಾರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net