ವಾರ ಭವಿಷ್ಯ: ಗುರು- ಶನಿ ಬರುವ ಏಳು ದಿನ ನಿಮ್ಮ ರಾಶಿಗೆ ಏನನ್ನು ಮಾಡುತ್ತಾನೆ?

Vara-Bhavishya-2
Published on
27.02.2022- 05.03.2022

ಮೇಷ:

ಮೇಷ ರಾಶಿಯವರಿಗೆ 11ರ ರವಿ-ಗುರು, ದಶಮದಲ್ಲಿ ಬುಧನಿದ್ದು, ಒಳ್ಳೆಯ ಕಾಲ ಸೂಚಿಸುತ್ತದೆ. ಮನುಷ್ಯನಿಗೆ ಗ್ರಹಗಳು ಚೆನ್ನಾಗಿದ್ದಾಗ ಒಳ್ಳೆಯ ಕೆಲಸಗಳನ್ನು ಮಾಡಿದರೆ ಗ್ರಹಗಳು ಪಲ್ಲಟವಾದರೂ ಸಮಸ್ಯೆ ಬರುವುದಿಲ್ಲ. ದೇವರು ಕೊಟ್ಟದ್ದನ್ನು ಮತ್ತೊಬ್ಬರಿಗೆ ಕೊಟ್ಟರೆ ಅದರ ಲವು ಸಹಸ್ರವಾಗುವುದು. ಕೊಟ್ಟು ಸಂತೋಷಪಡಬೇಕು. ದತ್ತಾತ್ರೇಯನನ್ನು ಪೂಜಿಸಿ.

ವೃಷಭ:

ಗುರುವು ಏಕಾದಶಕ್ಕೆ ಬರಲಿದ್ದಾನೆ. ಕೊಟ್ಟ ಮಾತನ್ನು ನಡೆಸಲೇ ಬೇಕು. ರಾಹು-ಕೇತು ನಿಮ್ಮನ್ನು ಸಂರಸುತ್ತಾರೆ. ಈಗಲೇ ದೃಢಸಂಕಲ್ಪ ಮಾಡಿಕೊಂಡು ನಿಮ್ಮನ್ನು ನೀವು ತಿದ್ದಿಕೊಂಡು ನಡೆದರೆ ಶ್ರೇಯಸ್ಕರ. ನಾಗರಾಜ ಅಷ್ಟೋತ್ತರ ಪಠಿಸಿರಿ. ತಂದೆ-ತಾಯಿಯ ಆಶೀರ್ವಾದ ಪಡೆಯಿರಿ.

ಮಿಥುನ:

9ರ ಗುರುವು 10ಕ್ಕೆ ಚಲಿಸಿ ಗುರುಬಲದಲ್ಲಿ ವ್ಯತ್ಯಯವಾಗುತ್ತದೆ. ಒಂದು ತಿಂಗಳ ಕಾಲ ಗುರುವು ಕೊಟ್ಟ ವರವನ್ನು ಸ್ವೀಕರಿಸಿ. ಸಾರ್ಥಕವಾದ ಬಾಳನ್ನು ನಡೆಸಿ. ಅಷ್ಟಮದಲ್ಲಿ ಶನಿಯಿದ್ದಾನೆ. ಆರೋಗ್ಯ ಹಾಗೂ ಹಣಕಾಸಿನ ವಿಚಾರದಲ್ಲೂ ಜಾಗರೂಕತೆಯಿಂದಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.

ಕಟಕ:

ಮನಸ್ಸೊಂದಿದ್ದರೆ ಕೆಲಸವು ಮುನ್ನಡೆಯುತ್ತದೆ. ಶಿವಪ್ರಾರ್ಥನೆ ಅತ್ಯಗತ್ಯ. ಮುಖ್ಯವಾಗಿ, ಬೇಕಾದ್ದನ್ನು ಪಡೆದುಕೊಂಡು, ಬೇಡದ್ದನ್ನು ಬಿಡಲು ಉದ್ಯುಕ್ತರಾದರೆ ನಿಮ್ಮ ಬಾಳು ಆನಂದಮಯವಾಗುತ್ತದೆ. 2022ನೇ ಇಸವಿಯು ನಿಮ್ಮ ಪಾಲಿಗೆ ಒಳ್ಳೆಯದಾಗುತ್ತದೆ.

ಸಿಂಹ:

ಆರರ ಶನಿ, ಏಳರ ಗುರುವು ಬೇಕಾದ್ದನ್ನು ಕೊಟ್ಟಿದ್ದಾನೆ. ಕೊಟ್ಟ ಮೇಲೆ ನೀವು ಸುಖವಾಗಿ ಇರಲೇಬೇಕು. ನಿಮ್ಮ ಬಾಳನ್ನು ಬೆಳಕಾಗಿಸಲು ಸೂರ್ಯ ಪ್ರಾರ್ಥನೆಯೊಂದೇ ಸಾಕು. ಸೂರ್ಯ ಅಷ್ಟೋತ್ತರ ಮತ್ತು ಸೂರ್ಯ ಕವಚವನ್ನು ಪಠಿಸಿ. ಕೆಂಪು ಹೂವಿನಿಂದ ಸೂರ್ಯನನ್ನು ಅಚಿರ್ಸಿ. ಯಾವ ಭಯವೂ ಇಲ್ಲ. ಆರೋಗ್ಯವು ಉಲ್ಲಾಸದಿಂದ ಕೂಡಿರುತ್ತದೆ.

ಕನ್ಯಾ:

ಭಾಗ್ಯವನ್ನು ಕೊಡುವ ಗುರು-ಶನಿಯು ಸ್ಥಾನ ಪಲ್ಲಟವಾಗಲು ಸಂಯಮದಿಂದ ನಿಮ್ಮ ಕಾಲವನ್ನು ನಿರೀಸಿ. ಅಲ್ಲಿಯತನಕ ಮಹಾವಿಷ್ಣುವನ್ನು ಪೂಜಿಸಿ. ಅನಂತ ಪದ್ಮನಾಭನ ವ್ರತಕಥೆಯನ್ನು ಓದಿರಿ. 2 ವರ್ಷ 8 ತಿಂಗಳ ಕಾಲ ಕಳೆದುಕೊಂಡಿದ್ದನ್ನು ಮತ್ತೆ ಪಡೆಯಬಹುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಕಾಲವೂ-ಸಮಯವೂ ನಿಮಗೆ ಒಳ್ಳೆಯದನ್ನೇ ಮಾಡುತ್ತದೆ.

ತುಲಾ:

ಪಂಚಮ ಗುರುವು ಆನಂದ, ತೃಪ್ತಿ ನೀಡಿದ್ದಾನೆ. ಸಣ್ಣ-ಪುಟ್ಟ ತೊಂದರೆಗೆ ಹೆದರಬಾರದು. ಗುರಿ ಇದ್ದವನ್ನು ಸಾಹಸ ಮಾಡಿ ಇಷ್ಟಾರ್ಥ ಸಿದ್ಧಿಸಿಕೊಳ್ಳಬೇಕು. ಕೋರ್ಟು-ಕಚೇರಿ ವ್ಯವಹಾರದಲ್ಲಿ ಜಯ ತಂದುಕೊಡಲು ಗುರುವಿದ್ದಾನೆ. ಅತಿಯಾಗಿ ಕೆಲಸ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ನಿಗದಿತ ವೇಳೆಯಷ್ಟೇ ಕೆಲಸ ಮಾಡಿ. ಕಾರ್ಯಜಯಕ್ಕೆ ಸುಬ್ರಹ್ಮಣ್ಯನ ಪ್ರಾರ್ಥನೆ ಅಗತ್ಯ.

ವೃಶ್ಚಿಕ:

ಶರವೇಗದಲ್ಲಿ ಬರಲಿರುವ ಪಂಚಮ ಗುರುವು ನಿಮಗೆ ಉಲ್ಲಾಸ, ಆನಂದವನ್ನು ತರಲಿದ್ದಾನೆ. ಕಷ್ಟಪಟ್ಟು ಮಾಡುವ ಕೆಲಸಗಳಿಗೆ ತಕ್ಕ ಪ್ರತಿಲ ಕೊಟ್ಟೇ ಕೊಡುತ್ತಾನೆ. ಭಾಗ್ಯವನ್ನು ಕೊಡುವ ಗುರುವಿಗೆ ನೀವು ಏನು ಕೊಡಬಲ್ಲಿರಿ? ಆದರೂ, ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳಿ. ದೇವತಾ ಪ್ರಾರ್ಥನೆ, ಸೇವೆಗಳನ್ನು ಪರಿಪೂರ್ಣಗೊಳಿಸಿ.

ಧನುಸ್ಸು:

ಶನಿಸಂಚಾರ ಮುಗಿಯಲಿದ್ದು, ನಿಮ್ಮ ಸಾಧನೆಯ ಹಾದಿಯಲ್ಲಿ ಮುಂದುವರಿಯಿರಿ. ಹೊಸ ಚಿಂತನೆ, ವಿಚಾರ ಕೈಗೆತ್ತಿಕೊಂಡರೆ ದೇವರು ನಿಮ್ಮನ್ನು ಹರಿಸಿ, ಬೇಕಾದ್ದನ್ನು ಕೊಡುತ್ತಾನೆ. ಜಾಗ್ರತೆಯಿಂದ ಮುಂದುವರಿಯಿರಿ. ಎಂದೆಂದಿಗೂ ಪರಿಪೂರ್ಣ ಅನುಗ್ರಹ ನೀಡುವ ದತ್ತಾತ್ರೇಯನನ್ನು, ಶ್ರೀರಾಮಚಂದ್ರನನ್ನು ನಿತ್ಯವೂ ಪೂಜಿಸಿ.

ಮಕರ:

ಅಂತೂ-ಇಂತೂ ಬಿಡುಗಡೆಯಾಯಿತು. ಶನಿಯು  ದ್ವಿತೀಯಕ್ಕೆ ಹೋಗಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಯಾವುದೇ ವ್ಯವಹಾರ ಮಾಡಿದರೂ, ಶನಿ ಸ್ವಕ್ಷೇತ್ರದಲ್ಲಿ ಇನ್ನು ಎರಡು ವರ್ಷ ಇರುತ್ತಾನೆ. ಯಾವ ಕೆಲಸ ಕೈಗೊಳ್ಳಬೇಕಾದರೂ ಗುರು-ಹಿರಿಯರ ಸಲಹೆಯ ಮೇರೆಗೆ ಮುಂದುವರಿಯಿರಿ. ತಾಳ್ಮೆಯಿಂದ ಮುನ್ನಡೆಯಿರಿ.

ಕುಂಭ:

ಹನ್ನೆರಡರ ಶನಿ-ಜನ್ಮಕ್ಕೆ ಬರುತ್ತಾನೆ. ಜನ್ಮಶನಿ ಸ್ವಕ್ಷೇತ್ರದಲ್ಲಿ ಇದ್ದರೂ, ಕೊಡುವಾಗ ಕೊಟ್ಟು ನಿಮ್ಮನ್ನು ಪೊರೆದಿದ್ದಾನೆ. ಜನ್ಮಶನಿಯಲ್ಲಿ ದೇವತಾ ಪ್ರಾರ್ಥನೆಯೇ ಮುಖ್ಯವಾಗಿರಲಿ. ಲಲಿತಾ ಅಷ್ಟೋತ್ತರ ಪಾರಾಯಣ ಮಾಡಿ. ಮನಸ್ಸು ಶಾಂತವಾಗಿ ಇರುತ್ತದೆ, ಆರೋಗ್ಯವೂ ಇರುತ್ತದೆ.

ಮೀನ:

ಮನುಷ್ಯನ ಆಸೆಗಳಿಂದಲೇ ಮನಸ್ಸಿಗೆ ಕೊರಗು ಉಂಟಾಗುತ್ತದೆ. ದೇವರು ಕೊಟ್ಟಿದ್ದಕ್ಕೆ ತೃಪ್ತಿ ಇರಲಿ. ದೇವರು ಮತ್ತಷ್ಟು ಕೊಡುತ್ತಾನೆ. ಕೊಡುವ ಈಶ್ವರನು ಯಾವುದಕ್ಕೂ ಕಡಿಮೆ ಮಾಡುವುದಿಲ್ಲ. ಈಶ್ವರನನ್ನು ಅರ್ಚಿಸಿ. ಗುರುವಿನ ಅನುಗ್ರಹಕ್ಕಾಗಿ ಗುರು ಅಯ್ಯಪ್ಪನನ್ನು ಪೂಜಿಸಿ. ದುರ್ಗಾ ಅಷ್ಟೋತ್ತರ ಹಾಗೂ ಅಯ್ಯಪ್ಪನ ನಾಮಾವಳಿ ಜಪಿಸಿ. ಜೀವನದಲ್ಲಿ ಹೊಸ ಚೈತನ್ಯ ಮೂಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net