ಮತ್ತೆ ಅಪಘಾತಕ್ಕೀಡಾದ ವಂದೇ ಭಾರತ್ ಎಕ್ಸ್​ಪ್ರೆಸ್​

Vande Bharath Express
Published on

ನವದೆಹಲಿ: ಮುಂಬೈ ಸೆಂಟ್ರಲ್ ವಿಭಾಗದಿಂದ ಸಂಚರಿಸುವ ವಂದೇ ಭಾರತ್ ಎಕ್ಸ್​​ಪ್ರೆಸ್​ ರೈಲು, ಅತುಲ್ ಎಂಬ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ರೈಲು ಮುಂಬೈನಿಂದ ಗಾಂಧಿನಗರಕ್ಕೆ ಸಂಚರಿಸುತ್ತಿತ್ತು. ಈ ವೇಳೆ ದನಕರುಗಳು ಹಳಿಯಲ್ಲಿ ಅಡ್ಡ ಬಂದುದರಿಂದ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಅಪಘಾತದಿಂದ ಡ್ರೈವರ್​ಕೋಚ್​ನ ಮುಂಭಾಗಕ್ಕೆ ಹಾನಿಯಾಗಿದೆ. ಆದಷ್ಟು ಬೇಗ ಇದನ್ನು ಸರಿಪಡಿಸಲಾಗುವುದು. ಅಪಘಾತ ನಡೆದ 15 ನಿಮಿಷಗಳ ನಂತರ,ರೈಲು ಮತ್ತೆ ಗಾಂಧಿನಗರಕ್ಕೆ ಪ್ರಯಾಣ ಬೆಳೆಸಿದೆ. ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಭಾರತೀಯ ರೈಲ್ವೇ ತಿಳಿಸಿದೆ.

ಈ ಹಿಂದೆಯೂ ವಂದೇ ಭಾರತ್​ ಎಕ್ಸ್​ಪ್ರೆಸ್​​ ರೈಲಿಗೆ ಎಮ್ಮೆಯ ಹಿಂಡು ಡಿಕ್ಕಿಯಾಗಿ, ರೈಲಿಗೆ ಹಾನಿಯಾಗಿತ್ತು. ಹೀಗಾಗಿ ರೈಲ್ವೇ ಅಧಿಕಾರಿಗಳು ಈ ಭಾಗದ ರೈತರಲ್ಲಿ 'ನಿಮ್ಮ ದನಕರುಗಳನ್ನು ರೈಲ್ವೇ ಹಳಿ ಪ್ರದೇಶದಲ್ಲಿ ಮೇಯಲು ಬಿಡಬೇಡಿ' ಎಂದು ಮನವಿ ಮಾಡಿದ್ದರು. ಆದರೆ ಇದೀಗ ಮತ್ತೊಮ್ಮೆ ಸಾಕುಪ್ರಾಣಿಗಳ ಕಾರಣದಿಂದ ರೈಲಿಗೆ ಹಾನಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net