ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಉರುಳಿದ ವ್ಯಾನ್; ಮೂವರು ಮೃತ್ಯು| google map

accident
Published on

ಜೈಪುರ: ಗೂಗಲ್ ಮ್ಯಾಪ್ ಅನ್ನು ನಂಬಿ ವ್ಯಾನ್ ಚಾಲನೆ ಮಾಡಿಕೊಂಡು ಹೋಗಿದ್ದಕ್ಕೆ ನಕ್ಷೆಯು ವಾಹನ ಚಾಲಕನನ್ನು ಮುಚ್ಚಿದ ಸೇತುವೆಯ ಮೇಲೆ ಕರೆದೊಯ್ದರಿಂದ ವ್ಯಾನ್ ನದಿಗೆ ಉರುಳಿ ಬಿದ್ದ ಘಟನೆ ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ನಡೆದಿದೆ. ಇನ್ನೂ ಈ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಒಂದು ಮಗು ನಾಪತ್ತೆಯಾಗಿದೆ ಎನ್ನಲಾಗಿದೆ.

ಗೂಗಲ್ ನಕ್ಷೆಯನ್ನು ನಿರ್ದೇಶನಗಳಿಗಾಗಿ ಅವಲಂಬಿಸಿದ್ದ ಚಾಲಕ, ತಿಳಿಯದೆ ವ್ಯಾನ್ ಅನ್ನು ಹಲವಾರು ತಿಂಗಳುಗಳಿಂದ ಮುಚ್ಚಿದ್ದ ಸೋಮಿ-ಉಪ್ರೆಡಾ ಸೇತುವೆಯ ಮೇಲೆ ಚಾಲನೆ ಮಾಡಿದ್ದಾನೆ. ವ್ಯಾನ್ ಸೇತುವೆಯನ್ನು ಪ್ರವೇಶಿಸುತ್ತಿದ್ದಂತೆ, ನಿಯಂತ್ರಣಕ್ಕೆ ಸಿಗದೆ ನದಿಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬವು ಭಿಲ್ವಾರಕ್ಕೆ ಧಾರ್ಮಿಕ ಪ್ರವಾಸದಿಂದ ಹಿಂತಿರುಗುತ್ತಿತ್ತು, ನದಿಯ ಮೇಲಿನ ಸೇತುವೆಯನ್ನು ದಾಟಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಪರಿಣಾಮ ಬನಾಸ್ ನದಿಯ ಬಲವಾದ ಪ್ರವಾಹಕ್ಕೆ ವಾಹನ ಕೊಚ್ಚಿ ಹೋಗಿದೆ ಎಂದು ಪೊಲೀಸರು ನಿನ್ನೆ(27) ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು.?

ವ್ಯಾನ್‌ನಲ್ಲಿದ್ದ ಜನರು ಕಿಟಕಿ ಒಡೆದು ಅದರ ಛಾವಣಿಯ ಮೇಲೆ ಹತ್ತಿದರು. ಅವರಲ್ಲಿ ಒಬ್ಬರು ತಮ್ಮ ಸಂಬಂಧಿಗೆ ಕರೆ ಮಾಡಿದರು, ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಠಾಣಾಧಿಕಾರಿ ರಶ್ಮಿ ದೇವೇಂದ್ರ ಸಿಂಗ್ ಅವರು ಬೇಗನೆ ಸ್ಥಳಕ್ಕೆ ಆಗಮಿಸಿ ದೋಣಿ ವ್ಯವಸ್ಥೆ ಮಾಡಿದರು. ಕತ್ತಲೆಯಲ್ಲಿ ಕುಟುಂಬವನ್ನು ತಲುಪುವುದು ಕಷ್ಟಕರವಾಗಿತ್ತು, ಆದರೆ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕೆಲಸ ಮಾಡಿ ವ್ಯಾನ್​ಅನ್ನು ತಲುಪುವಲ್ಲಿ ಯಶಸ್ವಿಯಾದರು ಎಂದು ಎಸ್​ಪಿ ಹೇಳಿದ್ದಾರೆ.

(ಏಜೆನ್ಸೀಸ್)

ಕುಟುಂಬ ಸದಸ್ಯರು ತಮ್ಮ ಮೊಬೈಲ್ ಟಾರ್ಚ್ ಮೂಲಕ ರಕ್ಷಣಾ ತಂಡಗಳಿಗೆ ಸಿಗ್ನಲ್ ನೀಡಿದ್ದರು ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ. ಆದಾಗ್ಯೂ ಪೊಲೀಸರು ಸಿಲುಕಿಕೊಂಡಿದ್ದ ಕುಟುಂಬವನ್ನು ತಲುಪುವ ಹೊತ್ತಿಗೆ, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸಾವನ್ನಪ್ಪಿದ್ದು, ಮತ್ತೊಂದು ಮಗು ಕೊಚ್ಚಿ ಹೋಗಿತ್ತು. ಆ ಮಗುವಿಗಾಗಿ ಹಡುಕಾಟ ನಡೆಸಲಾಗುತ್ತಿದೆ. ಇನ್ನೂ ಈ ಘಟನೆಯಲ್ಲಿ ಒಟ್ಟು ಐದು ಜನರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net