ಆನೆ ದಂತದಿಂದ ತಯಾರಿಸಿದ ವಾಕಿಂಗ್ ಸ್ಟಿಕ್ ಸೇರಿದಂತೆ ಪುರಾತನ ಕಾಲದ ವಸ್ತುಗಳ ಸಮೇತ ಸಿಸಿಬಿಗೆ ಸಿಕ್ಕಿಬಿದ್ದ ಗ್ಯಾಂಗ್​!

elephant tusk
Published on

ಬೆಂಗಳೂರು: ಕೋಟ್ಯಂತರ ರೂ. ಬೆಲೆಬಾಳುವ, ಪುರಾತನ ಕಾಲದ ಆನೆ ದಂತದಿಂದ ಮಾಡಿರುವ ವಾಕಿಂಗ್ ಸ್ಟಿಕ್, ಆಭರಣ ಇಡುವ ಬಾಕ್ಸ್, ಕೈಗಡಗ, ಆನೆಗಳ ಆಕೃತಿ, ಶಂಖ, ನೂರಾರು ವರ್ಷ ಹಳೆಯದಾದ ಅಂಬರ್ ಅನ್ನು ಸಾಗಿಸುತ್ತಿದ್ದ ಆ ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಹಿಮ್ಮತ್ ಸಿಂಗ್, ಪ್ರವೀಣ್ ಸಾಂಬಿಯಾಲ್. ಅಬ್ದುಲ್ ಕಯೂಮ್, ಮಹಮ್ಮದ್ ರಫೀಕ್, ಮೊಹಮ್ಮದ್ ಇಸ್ರಾರ್ ಅಲಿಯಾಸ್​ ಬಾಬು ಮತ್ತು ಅಮ್ಜದ್ ಪಾಷ ಬಂಧಿತರು. ಇವರು ಹರಿಯಾಣ, ಪಂಜಾಬ್, ಬೆಂಗಳೂರು ಮತ್ತು ಮೈಸೂರು ಮೂಲದವರು.

ಪುರಾತನ ಕಾಲದ ಆನೆದಂತಗಳಿಂದ ಮಾಡಿರುವ ವಸ್ತುಗಳನ್ನು ರಾಜ ಮನೆತಗಳಿಂದ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ರಾಜ ಮನೆತನದವರನ್ನು ಸಿಸಿಬಿ ಸಂಪರ್ಕಿಸಿದ್ದು, ಮಾಹಿತಿ ಕೇಳಲಾಗಿದೆ. ವಸ್ತುಗಳು ಮೊಘಲರ ಕಾಲದಲ್ಲಿ ತಯಾರಾಗಿರುವ ರೀತಿ ಕಾಣುತ್ತಿದೆ. ಡೆಹ್ರಾಡೂನ್​ನಲ್ಲಿ ಇರುವ ವೈಲ್ಟ್ ಲೈಫ್ ಇನ್​ಸ್ಟಿಟ್ಯೂಟ್​ಗೆ ಕಳಿಸಿ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ವಶಕ್ಕೆ ಪಡೆದಿರುವ ವಸ್ತುಗಳಿಗೆ ಬೆಲೆ ಕಟ್ಟಲು ಸಾದ್ಯವಾಗಿಲ್ಲ. ಆದರೆ ಕೋಟ್ಯಂತರ ರೂ.ಗೆ ಡೀಲ್ ನಡೆಸಲು ಮುಂದಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net