ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು; ಶಾಸಕ ಪ್ರಕಾಶ

7-RNR-01
Published on

ರಾಣೆಬೆನ್ನೂರ: ವಾಲ್ಮೀಕಿ ಸಮಾಜದವರು ಶೈಕ್ಷಣಿಕವಾಗಿ ಬೆಳೆಯಲು ಪ್ರತಿಯೊಬ್ಬ ಪಾಲಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ಏರ್ಪಡಿಸಿದ್ದ ಮಹಷಿರ್ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಜಗತ್ತಿಗೆ ಮೊದಲ ಕವಿಯಾಗಿ ನಿಂತ ವಾಲ್ಮೀಕಿ ಜಗತ್ತಿಗೆ ರಾಮನನ್ನು ಪರಿಚಯಿಸಿದರು. ನಾವು ಈಗ ರಾಮ ರಾಜ್ಯ, ಜೈ ಶ್ರೀರಾಮ ಅಂತ ಕೂಗಲು ಮಹಷಿರ್ ವಾಲ್ಮೀಕಿ ಕಾರಣ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.

ರಾಮಾಯಾಣ ಕೃತಿಯಲ್ಲಿ ಜೀವನದಲ್ಲಿ ಹೇಗೆ ಬದುಕಬೇಕು ಎಂಬುಂದು ಅದರಲ್ಲಿ ತೋರಿಸಿಕೊಟ್ಟಿದ್ದಾರೆ. ಅಣ್ಣ ತಮ್ಮಂದಿರು, ತಂದೆ ತಾಯಿ, ಪತ್ನಿ ಹೇಗೆ ಇರಬೇಕೆಂದು ಎಂಬುದನ್ನು ಕೃತಿ ಮೂಲಕ ಅರಿವು ಮೂಡಿಸಿದ್ದಾರೆ. ಎಲ್ಲರ ಮನಸ್ಸಿನಲ್ಲಿ ರಾಮನಿದ್ದರೆ, ಕೆಲವರ ಮನಸ್ಸಿನಲ್ಲಿ ರಾವಣ ಇರುತ್ತಾನೆ. ಅದನ್ನು ತಡೆದು ರಾಮವಾಗುವುದು ನಿಜವಾದ ಆದರ್ಶ ಎಂಬುದನ್ನು ವಾಲ್ಮೀಕಿ ಅವರ ತೋರಿಸಿಕೊಟ್ಟಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಣ್ಣ ಮೋಟಗಿ, ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​, ಡಿವೈಎಸ್ಪಿ ಲೋಕೇಶ, ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ, ತಾಪಂ ಇಒ ಪರಮೇಶ, ಬಿಇಒ ಶ್ಯಾಮಸುಂದರ ಅಡಿಗ, ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಸಮಾಜದ ತಾಲೂಕು ಅಧ್ಯಕ್ಷ ಚಂದ್ರಣ್ಣ ಬೇಡರ, ಸಣ್ಣತಮ್ಮಪ್ಪ ಬಾಕಿರ್, ಮಶಪ್ಪ ಮದ್ಲೇರ, ರಾಮಣ್ಣ ನಾಯಕ, ರವಿ ತಳವಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net