

ಹರೀಶ್ ಬೇಲೂರು
ಬೆಂಗಳೂರು: ಪ್ರೇಮಬಂಧನದಲ್ಲಿ ಸಿಲುಕಿ ಮಧುರ ಕ್ಷಣಗಳನ್ನು ಕಳೆಯಲು ಸಿದ್ಧವಾಗಿರುವ ಪ್ರೇಮಿಗಳು, ಕದ್ದುಮುಚ್ಚಿ ಇಷ್ಟಪಡುತ್ತಿರುವವರು ಮನದಾಳದ ನಿವೇದನೆಗೆ ಆಲೋಚನೆ, ನೆಚ್ಚಿನ ಸಂಗಾತಿಗೆ ವಿಶೇಷ ಗಿಫ್ಟ್ ನೀಡಲು ಚಿನ್ನಾಭರಣ ಖರೀದಿ, ದೂರದ ಪ್ರೇಮಿಗೆ ಹೃದಯರ್ಸ³ ಸಂದೇಶ ರವಾನೆ, ಪ್ರೇಮಪತ್ರ ಕೊಟ್ಟು ಮನಗೆಲ್ಲಲು ಕಸರತ್ತು, ಪ್ರೇಮಾಂಕುರವಿದ್ದರೂ ಪ್ರೀತಿ ಸಾಬೀತಿಗೆ ವಿಧಾನ ಕಂಡುಕೊಳ್ಳುವಿಕೆ... ಪ್ರೇಮಿಗಳ ದಿನಾಚರಣೆಯಂದು ಕಂಡುಬರುವ ಚಿತ್ರಣಗಳಿವು.
ವಿಭಿನ್ನ ಕಾರ್ಯಕ್ರಮಗಳ ಆಯೋಜನೆ: ಗ್ರೀಟಿಂಗ್ಸ್, ಗಿಫ್ಟ್ ಶಾಪ್ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹೋಟೆಲ್, ರೆಸ್ಟೋರೆಂಟ್, ಪ್ರವಾಸಿ ತಾಣಗಳು ಹಾಗೂ ರೆಸಾರ್ಟ್ಗಳು ಈಗಾಗಲೆ ‘ಜೋಡಿಹಕ್ಕಿ’ಗಳನ್ನು ಸೆಳೆಯಲು ವಿಭಿನ್ನ ಕಾರ್ಯಕ್ರಮ ಆಯೋಜಿಸಿವೆ. ಕದ್ದುಮುಚ್ಚಿ ಇಷ್ಟಪಡುತ್ತಿರುವವರು ವೈಶಿಷ್ಟ್ಯಪೂರ್ಣವಾಗಿ ಪ್ರೇಮ ನಿವೇದನೆಗೆ ಸನ್ನದ್ಧರಾಗಿದ್ದಾರೆ. ಪ್ರೇಮಿಗಳ ದಿನದಂದೇ ವೈವಾಹಿಕ ಜೀವನಕ್ಕೆ ಕಾಲಿಡಲು ಕೆಲ ಜೋಡಿ ಸಿದ್ಧತೆ ನಡೆಸಿದ್ದಾರೆ.
ಗುಲಾಬಿ ಬೆಳೆದ ರೈತರಿಗೆ ಮಂದಹಾಸ
ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಕಂಗುಲಾಬಿ ಹೂಗಳಿಗೆ ಬೇಡಿಕೆ ಹೆಚ್ಚಿದೆ. ರಾಜ್ಯದ ಗುಲಾಬಿ ಹೂಗಳಿಗೆ ವಿದೇಶಗಳಿಂದ ಹೆಚ್ಚಿನ ಬೇಡಿಕೆ ಬರಲಾರಂಭಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.20 ಡಿಮ್ಯಾಂಡ್ ಹೆಚ್ಚಾಗಿದೆ. ಕಳೆದ ವರ್ಷ ಫೆ.14ರಂದು 515 ಟನ್ ಗುಲಾಬಿ ರಫ್ತಾಗಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಲಂಡನ್, ಸಿಂಗಾಪುರ, ದುಬೈ, ಕುವೈತ್, ಆಮ್್ಟರ್ಡ್ಯಾಂ, ಮನಿಲಾ, ಮಸ್ಕತ್, ದೆಹಲಿ, ಮುಂಬೈ, ಗುವಾಹಟಿ, ಕೋಲ್ಕತ್ತ ಸೇರಿ ಇತರ ನಗರಗಳಿಗೆ ಈಗಾಗಲೆ ಗುಲಾಬಿ ಹೂಗಳು ತಲುಪಿವೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಹೆಚ್ಚಾಗಿ ಗುಲಾಬಿ ಬೆಳೆಯಲಾಗುತ್ತಿದೆ. ಇಲ್ಲಿಂದಲೇ ಹೆಚ್ಚಾಗಿ ವಿದೇಶಗಳಿಗೆ ರಫ್ತಾಗುತ್ತಿದೆ. ಫೆಬ್ರವರಿ ಮೊದಲ ಎರಡು ವಾರದಲ್ಲೇ ಹೂವುಗಳಿಗೆ ಬೇಡಿಕೆ ಬಂದಿತ್ತು. ತಾಜ್ವುಹಲ್ (ಕೆಂಗುಲಾಬಿ), ಸಮುರಾಯ್, ಗೋಲ್ಡ್ಸ್ಟ್ರೇಕ್ ಎಲ್ಲೋ, ಹಾಟ್ಶಾಟ್, ಬೋನಿಯರ್, ಸೌರನ್, ಜ್ಯುಮಿಲಿಯಾ, ರಾಕ್ಸ್ಟಾರ್, ಡಚ್ ಸೇರಿ ತರಹೇವಾರಿ ಗುಲಾಬಿ ಹೂವುಗಳಿಗೆ ಬೇಡಿಕೆ ಬೇಡಿಕೆ ಇದೆ. ಬೆಂಗಳೂರು, ಬೆಂ.ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೆಚ್ಚಾಗಿ ಗುಲಾಬಿ ಹೂವುಗಳನ್ನು ಬೆಳೆದಿದ್ದು, ಈ ಬಾರಿ ಹೆಚ್ಚು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಗುಲಾಬಿ ಬೆಳೆದ ರೈತರ ಮುಖದಲ್ಲಿ ಮಂದಹಾಸ ಬೀರುವಂತಾಗಿದೆ.
ಇ-ಗ್ರೀಟಿಂಗ್ ಕಾರ್ಡ್
ವರ್ಚುವಲ್ ಇ-ಗ್ರೀಟಿಂಗ್ ಕಾರ್ಡ್ಗಳು ಟ್ರೆಂಡಿಯಾಗಿವೆ. ಟೀನೇಜ್ ಹುಡುಗ-ಹುಡುಗಿಯರು ಸೇರಿ ಎಲ್ಲ ವರ್ಗದ ಪ್ರೇಮಿಗಳನ್ನು ಇವು ಆಕರ್ಷಿಸಿವೆ. ಕೆಲವರು ಆನ್ಲೈನ್ನಲ್ಲಿ ತಮಗೆ ಇಷ್ಟವಾದ ಇ-ಗ್ರೀಟಿಂಗ್ ಕಾರ್ಡ್ ಖರೀದಿಸಿದ್ದು, ಈ ಮೂಲಕ ತಮ್ಮ ಪ್ರೀತಿಪಾತ್ರರಿಗೆ ಸುಲಭವಾಗಿ ಮನದ ಭಾವವನ್ನು ದಾಟಿಸಲಿದ್ದಾರೆ. ದೂರದಲ್ಲಿರುವ ಪ್ರೇಮಿಗೆ ಅಥವಾ ಸಂಗಾತಿಗೆ ವಿಶಿಷ್ಟ ಚಿತ್ರ ಮತ್ತು ಪದಗಳ ಮೂಲಕ ಭಾವನಾತ್ಮಕವಾಗಿ ಪ್ರೇಮದ ಸಂದೇಶ ಕಳುಹಿಸುವುದಕ್ಕೆ ಕಾಯುತ್ತಿದ್ದಾರೆ.
ಅಲಂಕೃತ ಶಾಪಿಂಗ್ ಸೆಂಟರ್ಗಳು
ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ಶಾಪಿಂಗ್ ಅಂಗಡಿಗಳು, ಮಾಲ್ಗಳು ಹಾಗೂ ಸ್ಟ್ರೀಟ್ ಶಾಪ್ಗಳು ವಿಶೇಷವಾಗಿ ಅಲಂಕೃತಗೊಂಡಿದ್ದು, ಪ್ರೇಮಿಗಳನ್ನು ಸೆಳೆಯಲು ವಿವಿಧ ಆಫರ್ ನೀಡಿವೆ. ಕಪಲ್ ಡಾಲ್ಸ್, ಟೆಡ್ಡಿಬೇರ್, ರೆಡ್ಪಿಲ್ಲೋಸ್, ಬ್ರೇಸ್ಲೆಟ್, ಸರಗಳು, ಚೈನ್ ಸೇರಿ ಮನೆಯನ್ನು ಸಿಂಗಾರಿಸುವ ಶೋಪೀಸ್ಗಳು, ಡೆಕೋರೇಟಿವ್ ವಸ್ತುಗಳು ಹೊಸ ರೂಪದಲ್ಲಿ ಸೆಳೆಯುತ್ತಿವೆ. ಅಲಂಕಾರಕ್ಕಾಗಿ ಬಳಸುವ ರೆಡ್ ಶೇಡ್ನ ಹೃದಯ ಗಾತ್ರದ ಬಲೂನ್ಗಳು ಅಂಗಡಿಗಳಲ್ಲಿ ದೊರೆಯುತ್ತಿವೆ. ಸಂಗಾತಿಗೆ ಆಭರಣಗಳನ್ನು ಊಡುಗೊರೆ ನೀಡಲು ಚಿನ್ನಾಭರಣ ಅಂಗಡಿಗಳಿಗೆ ಲಗ್ಗೆ ಇಟ್ಟಿದ್ದು, ಹೆಸರು ಅಥವಾ ನೆಚ್ಚಿನ ಹೆಸರು ಬರೆದಿರುವ ಕಪಲ್ ರಿಂಗ್, ಸರ ಮತ್ತು ಬಳೆಗಳನ್ನು ಖರೀಸಿದ್ದಾರೆ. ಪ್ರೇಮಿಗಳು ಹಾಗೂ ಜೋಡಿಗಳಿಗೆ ಕಪಲ್ ಔಟ್ಫಿಟ್ಗಳು ಬಿಡುಗಡೆಗೊಂಡಿವೆ.