

ಬೆಂಗಳೂರು: ಸಿನಿಮಾ ನಟ-ನಟಿಯರು ಪ್ರಾಣಿಗಳ ಮೇಲೆ ಪ್ರೀತಿ ಅನನ್ಯವಾದುದು. ವಿಶೇಷ ಕಾಳಜಿ ವಹಿಸುವ ಆಗಾಗ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಬೀದಿಯಲ್ಲಿ ತೊಂದರೆಗೊಳಾಗಿದ್ದ ಹಾವನ್ನು ನಟಿ ಕಾರುಣ್ಯ ರಾಮ್ ರಕ್ಷಿಸಿದ್ದಾರೆ. ಈ ಮೂಲಕ ತಮ್ಮ ಪ್ರಾಣಿ ಪ್ರೀತಿಯನ್ನು ಮೆರೆದಿದ್ದಾರೆ.
‘ಕಿರಗೂರಿನ ಗಯ್ಯಳಿಗಳು’, ‘ವಜ್ರಕಾಯ’, ‘ಪೆಟ್ರೋಮ್ಯಾಕ್ಸ್’ ಖ್ಯಾತಿಯ ನಟಿ ಕಾರುಣ್ಯ ರಾಮ್ ತಮ್ಮ ಮನೆಯ ಬೀದಿಯಲ್ಲಿ ಕಾಣಿಸಿಕೊಂಡಿದ್ದ ಹಾವೊಂದನ್ನು ಸಂರಕ್ಷಿಸಿದ್ದಾರೆ. ಶನಿವಾರ ರಾತ್ರಿ 11ರ ಸುಮಾರಿಗೆ ಮನೆಯ ಪಕ್ಕದಲ್ಲಿ ಹಾವು ಕಾಣಿಸಿಕೊಂಡಿದೆ. ಅದು ಕಪ್ಪೆಗಳು ನುಂಗಿದ್ದ ಕಾರಣಕ್ಕಾಗಿ ಮುಂದೆ ತೆರೆಳಲು ಸಾಧ್ಯವಾಗಿಲ್ಲ. ಇದನ್ನು ನೋಡಿದ ಕಾರುಣ್ಯ ರಾಮ್ ತಕ್ಷಣವೇ ಪ್ರಾಣಿಗಳನ್ನು ರಕ್ಷಣೆ ಮಾಡುವ ರವಿಕುಮಾರ್‌ಗೌಡ ಎಂಬುವವರನ್ನು ಸಂಪರ್ಕಿಸಿ, ಅವರಿಗೆ ತಿಳಿಸಿದ್ದಾರೆ. ಬಳಿಕ ಅಲ್ಲಿಗೆ ಬಂದ ರವಿಕುಮಾರ್ ಗೌಡ ಹಾಗೂ ತಂಡ ಹಾವನ್ನು ರಕ್ಷಿಸಿದ್ದು, ಭಾನುವಾರ ಬೆಳಗ್ಗೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಕಾರುಣ್ಯ ಮೊದಲಿನಿಂದಲೂ ಪ್ರಾಣಿ ಪ್ರೀತಿಯನ್ನು ತೋರುತ್ತಿದ್ದಾರೆ. ಈ ಹಿಂದೆ, ಕರೊನಾ ಬಳಿಕ ವನ್ಯಜೀವಿಗಳಿಗೆ ಸಂಕಷ್ಟ ಎದುರಾಗಿದ್ದ ಸಮಯದಲ್ಲಿ ಮೈಸೂರು ಅಭಯಾರಣ್ಯದಲ್ಲಿ ಚೀತಾವನ್ನು ಎರಡು ವರ್ಷ ದತ್ತು ಪಡೆದಿದ್ದರು. ಅಲ್ಲದೇ ಗೋವು, ಶ್ವಾನ ಸಂರಕ್ಷಣೆ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರಾಣಿ ಪ್ರೀತಿ ತೋರಿಸಿದ್ದಾರೆ. ‘ಪೆಟ್ರೋಮ್ಯಾಕ್ಸ್’ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದ ನಟಿ ಕಾರುಣ್ಯಾ ಸದ್ಯ ಉದ್ಯಮದಲ್ಲಿ ಬಿಜಿಯಾಗಿದ್ದಾರೆ. ಮುಂದೆ ದಿನಗಳು ಕೂಡಿಬಂದರೆ, ಅನಿಮಲ್ ೌಂಡೇಷನ್ ಆರಂಭಿಸುವ ಭರವಸೆ ವ್ಯಕ್ತಪಡಿಸುತ್ತಾರೆ.