ಪ್ರಜಾಪ್ರಭುತ್ವಕ್ಕೆ ವಾಜಪೇಯಿ ಕೊಡುಗೆ ಅನನ್ಯ

atalji (1)
ಹೊಳೆಹೊನ್ನೂರು ಬಿಜೆಪಿ ಮಂಡಲದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವನ್ನು ಆಚರಿಸಲಾಯಿತು. ಜಿ.ರಂಗಪ್ಪ, ಎಸ್.ಬಿ.ಸಿದ್ದಪ್ಪ, ಉಜ್ಜನಪ್ಪ ಮಾತನಾಡಿದರು. ಯು.ಕೆ.ವೆಂಕಟೇಶ್, ಕೆ.ಪಿ.ಕಿರಣ್‌ಕುಮಾರ್, ವಿಜಯಕುಮಾರ್, ಸತೀಶ್‌ಗೌಡ, ಆಶ್ವಿನಿ, ಪ್ರೇಮಾ ಇತರರಿದ್ದರು.
Published on

ಹೊಳೆಹೊನ್ನೂರು: ಭಾರತ ಕಂಡ ಅಪ್ರತಿಮ ನಾಯಕ ವಾಜಪೇಯಿ. ಪ್ರಧಾನಮಂತ್ರಿ, ವಿದೇಶಾಂಗ ಸಚಿವ, ಸಂಸತ್ತಿನ ವಿವಿಧ ಮುಖ್ಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿದ್ದರು. ವಿಪಕ್ಷದ ನಾಯಕ ಸ್ಥಾನವನ್ನೂ ಸಮರ್ಥವಾಗಿ ನಿಭಾಯಿಸಿದ್ದರು ಎಂದು ಹೊಳೆಹೊನ್ನೂರು ಬಿಜೆಪಿ ಮಂಡಲ ಅಧ್ಯಕ್ಷ ಎಂ.ಮಲ್ಲೇಶಪ್ಪ ಹೇಳಿದರು.

ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಹೊಳೆಹೊನ್ನೂರು ಬಿಜೆಪಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜಕೀಯ ಶಾಸ ಹಾಗೂ ಕಾನೂನು ವಿದ್ಯಾರ್ಥಿ ಆಗಿದ್ದಾಗ ವಿದೇಶಾಂಗ ವ್ಯವಹಾರಗಳಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡರು. ವಾಜಪೇಯಿ ಅವರು ಓರ್ವ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ಆದರ್ಶ ಶಿಕ್ಷಕರೊಬ್ಬರ ಕುಟುಂಬದಲ್ಲಿ ಜನಿಸಿದ ಅವರು, ಸಾರ್ವಜನಿಕ ಜೀವನದಲ್ಲಿ ಬೆಳೆದರು. ಅವರ ರಾಜಕೀಯ ಚಾಣಾಕ್ಷತನ ಭಾರತೀಯ ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆಯಾಗಿದೆ ಎಂದರು.

ವಾಜಪೇಯಿ ಪ್ರಜಾಸತ್ತಾತ್ಮಕ ಆಲೋಚನೆಗಳಿಗೆ ಬೆಲೆ ನೀಡುವ ನಾಯಕರಾಗಿದ್ದರು. ಮಹಿಳಾ ಸಬಲೀಕರಣ, ಸಾಮಾಜಿಕ ಸಮಾನತೆಯ ಹರಿಕಾರರಾಗಿ ಅವರು ಭಾರತವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಗುರಿ ಹೊಂದಿದ್ದರು. ವಿಶ್ವದ ಅತ್ಯಂತ ಬಲಿಷ್ಠ ಹಾಗೂ ಸಮೃದ್ಧಿ ದೇಶವನ್ನಾಗಿಸಲು ಕಂಕಣಬದ್ಧರಾಗಿದ್ದರು. ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು ಎಂದು ಹೇಳಿದರು.

ಪಟ್ಟಣದ ನೃಪತುಂಗ ವೃತ್ತದಿಂದ ಜಾಥಾ ಆರಂಭಿಸಿ ಪೇಟೆಬೀದಿ, ಭಗೀರಥ ವೃತ್ತದ ಮೂಲಕ ಸಂಚರಿಸಿ ಮಹಾತ್ಮ ಗಾಂಧಿ ವೃತ್ತದಲ್ಲಿ ಸಮಾವೇಶ ಗೊಂಡಿತು. ಮಂಡಲ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಚಂದ್ರಕುಮಾರ್, ಎಂ.ಬಿ.ಶಂಕರಮೂರ್ತಿ, ಮುಖಂಡರಾದ ಜಿ.ರಂಗಪ್ಪ, ಎಸ್.ಬಿ.ಸಿದ್ದಪ್ಪ, ಉಜ್ಜನಪ್ಪ, ಯು.ಕೆ.ವೆಂಕಟೇಶ್, ಕೆ.ಪಿ.ಕಿರಣ್‌ಕುಮಾರ್, ವಿಜಯಕುಮಾರ್, ಸತೀಶ್ ಗೌಡ, ಆಶ್ವಿನಿ, ಪ್ರೇಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net