

ಆಂಧ್ರಪ್ರದೇಶ: ಜುಲೈ 14 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ 'ಬೇಬಿ', ಇದೀಗ ಒಟಿಟಿ ಫ್ಲ್ಯಾಟ್ಫಾರ್ಮ್ನಲ್ಲೂ ರಿಲೀಸ್ ಆಗಲು ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಕುರಿತು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ 'ಆಸ್ಕ್ ಮಿ ಎನಿಥಿಂಗ್' ಎಂದು ಅಭಿಮಾನಿಗಳಿಗೆ ಕೇಳಿದ್ದಾರೆ. ಈ ವೇಳೆ ನಟಿ ವೈಷ್ಣವಿ ಚೈತನ್ಯ ಸಾಲು ಸಾಲು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿರುವುದು ಈಗ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ಲಾಭದಲ್ಲಿ ವಿಜಯ ಮಹಾಂತೇಶ ಬ್ಯಾಂಕ್
'ಬೇಬಿ' ಚಿತ್ರದಲ್ಲಿ ನಟಿ ವೈಷ್ಣವಿ ಚೈತನ್ಯ, ಆನಂದ್ ದೇವರಕೊಂಡ ಮತ್ತು ವಿರಾಜ್ ಅಶ್ವಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಸಾಯಿ ರಾಜೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರವು ಇದೀಗ ಆಹಾ ಎಂಬ ಒಟಿಟಿ ಫ್ಯಾಟ್ಫಾರ್ಮ್ನಲ್ಲಿ ಶುಕ್ರವಾರ ಸಿನಿಪ್ರೇಕ್ಷಕರ ಮುಂದೆ ಹಾಜರಾಗಲಿದೆ. ಸಿನಿಮಾ ಕುರಿತು ತಮ್ಮ ಅಭಿಮಾನಿಗಳೊಂದಿಗೆ ಸಂವಹನ ನಡೆಸಿದ ವೈಷ್ಣವಿ, ಹಲವು ಪ್ರಶ್ನೆಗಳ ಪೈಕಿ ಒಂದಷ್ಟು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಬೇಬಿ ಸಿನಿಮಾದಲ್ಲಿ ನಿಮ್ಮ ನೆಚ್ಚಿನ ಪಾತ್ರ ಯಾವುದು ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ‘ಪ್ರೇಮಿಸ್ತುನ್ನ’ ಹಾಡಿನ ನಂತರ ನಾನು ಸೀತಾಳ ಮನೆಗೆ ಹೋಗಿ, ಕಣ್ಣೀರಾಕುವ ಪಾತ್ರವೇ ನನ್ನ ನೆಚ್ಚಿನ ದೃಶ್ಯ ಎಂದು ನಟಿ ವೈಷ್ಣವಿ ಉತ್ತರಿಸಿದರು. ಇದರೊಟ್ಟಿಗೆ ಸಿನಿಮಾದಲ್ಲಿ ಇಂಟರ್ವಲ್ ಸೀನ್ ಬೇಡವಾಗಿತ್ತು. ಅದನ್ನು ಚಿತ್ರದಿಂದ ತೆಗೆಯಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸೂಪರ್ಹಿಟ್ 'ಬೇಬಿ' ಚಿತ್ರದಲ್ಲಿ ನಾಗಬಾಬು, ಲಿರಿಶಾ, ಕುಸುಮಾ ದೇಗಲಮರ್ರಿ, ಸಾಥ್ವಿಕ್ ಆನಂದ್, ಬಬ್ಲೂ, ಸೀತಾ, ಮೌನಿಕಾ ಮತ್ತು ಕೀರ್ತನಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).