ಉತ್ತರಾಖಂಡ್ ಹಿಮಸ್ಪೋಟ: ಸತ್ತವರ ಅಧಿಕೃತ ಸಂಖ್ಯೆ ಪ್ರಕಟಿಸಿದ ಸರ್ಕಾರ

uttarakhand
uttarakhand
Published on

ಡೆಹರಾಡೂನ್: ಫೆಬ್ರವರಿ 8 ರಂದು ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಹಿಮಬಂಡೆ ಸ್ಫೋಟದಿಂದ ಉಂಟಾದ ಪ್ರವಾಹ ದುರಂತದಲ್ಲಿ ಮೃತಪಟ್ಟವರ ಅಧಿಕೃತ ಸಂಖ್ಯೆಯನ್ನು ಉತ್ತರಾಖಂಡ್ ಸರ್ಕಾರ ಖಚಿತಪಡಿಸಿದೆ.

ಘಟನೆ ನಂತರ ಎನ್​ಡಿಆರ್​ಎಫ್ ತಂಡ ಸ್ಥಳದಲ್ಲಿ ಬೀಡು ಬಿಟ್ಟು ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಕಾರ್ಯಾಚರಣೆಯಲ್ಲಿ ಇದುವರೆಗೆ 61 ಶವಗಳು ಮಾತ್ರ ದೊರಕಿದ್ದವು 136 ಜನರು ಕಣ್ಮರೆಯಾಗಿದ್ದರು. ಇದೀಗ ಉತ್ತರಾಖಂಡ್ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದು, ಘಟನೆಯಲ್ಲಿ ಕಣ್ಮರೆಯಾಗಿದ್ದ 136 ಜನರೂ ಮೃತಪಟ್ಟಿದ್ದಾರೆ ಎಂದು ಹೇಳಿದೆ. ಈ ಮೂಲಕ ಘಟನೆಯಲ್ಲಿ ಒಟ್ಟು 196 ಜನ ಮೃತಪಟ್ಟಂತಾಗಿದೆ.

ಫೆ 8 ರಂದು ಚಮೋಲಿ ಜಿಲ್ಲೆಯ ದೌಲಿಗಂಗಾ ಬಳಿ ಹಿಮಬಂಡೆ ಸ್ಪೋಟಗೊಂಡ ಪರಿಣಾಮ ದೌಲಿಗಂಗಾ, ಅಲಕಾನಂದ ನದಿಯಲ್ಲಿ ಇದ್ದಕ್ಕಿದ್ದಂತೆ ಪ್ರವಾಹ ಉಂಟಾಗಿತ್ತು. ನದಿ ಕಣಿವೆಯಲ್ಲಿ ಕೆಲಸ ಮಾಡುತ್ತಿದ್ದ 196 ಜನ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಸತ್ತವರ ಶವಗಳಿಗಾಗಿ ಹುಡುಕಾಟ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net