ಹೆಂಡತಿ ಮೇಲಿನ ಅನುಮಾನದ ಹಿನ್ನೆಲೆಯಲ್ಲಿ ಆಕೆಯ ಗುಪ್ತಾಂಗವನ್ನೇ ಹೊಲಿದ ಗಂಡ!

wife
Published on

ಲಖನೌ: ಹೆಂಡತಿಯ ಮೇಲಿನ ಅನುಮಾನಕ್ಕೆ ಗಂಡ, ಆಕೆಯ ಗುಪ್ತಾಂಗವನ್ನೇ ತಾಮ್ರದ ದಾರದಿಂದ ಹೊಲಿದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ರಾಮ್​ಪುರ ಜಿಲ್ಲೆಯ ಮಿಲಾಕ್ ಪ್ರದೇಶ ವಾಸಿ ಇಂತಹ ಹೇಯ ಕೃತ್ಯವೆಸಗಿದ್ದಾನೆ. ಆತನಿಗೆ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತಂತೆ. ಆದರೆ ಹೆಂಡತಿಯನ್ನು ಸದಾ ಅನುಮಾನಿಸುತ್ತಿದ್ದ ಆತ ಆಕೆಗೆ ಸಾಕಷ್ಟು ಹೊಡೆಯುತ್ತಿದ್ದನಂತೆ. ಶನಿವಾರದಂದೂ ಇದೇ ರೀತಿಯಲ್ಲಿ ಅವರಿಬ್ಬರ ಮಧ್ಯೆ ಜಗಳವಾಗಿದೆ. ಕಂಠಪೂರ್ತಿ ಕುಡಿದು ಬಂದ ಗಂಡ ಹೆಂಡತಿಯನ್ನು ಕಟ್ಟಿ ಹಾಕಿದ್ದಾನೆ. ಆಕೆಯ ಬಾಯೊಗೆ ಬಟ್ಟೆ ತುಂಬಿದ್ದಾನೆ. ನಂತರ ತಾಮ್ರದ ದಾರದಿಂದ ಆಕೆಯ ಗುಪ್ತಾಂಗವನ್ನು ಹೊಲಿಯುವ ಪ್ರಯತ್ನ ಮಾಡಿದ್ದಾನೆ. ಒಂದೆರೆಡು ಹೊಲಿಗೆಯನ್ನೂ ಹಾಕಿದ್ದಾನೆ. ಅಷ್ಟರಲ್ಲಿ ರಕ್ತಸ್ರಾವ ಹೆಚ್ಚಾಗಿದ್ದು, ಆಕೆಯನ್ನು ಅಲ್ಲಿಯೇ ಬಿಟ್ಟು ಆತ ಹೊರನಡೆದಿದ್ದಾನೆ. ನೋವಿನಿಂದ ಬಳಲುತ್ತಿದ್ದ ಹೆಂಡತಿ ಕಷ್ಟ ಪಟ್ಟು ಫೋನ್​ ಎತ್ತಿಕೊಂಡು ಪೋಷಕರಿಗೆ ಕರೆ ಮಾಡಿದ್ದಾಳೆ. ತಕ್ಷಣ ಆಕೆಯ ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದು, ಆಕೆಯನ್ನು ಕಾಪಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಆಕೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಸಂತ್ರಸ್ತೆ ಎರಡು ತಿಂಗಳ ಗರ್ಭಿಣಿಯಾಗಿದ್ದಳಂತೆ. ಆ ವೇಳೆ ಆತ ಹೊಟ್ಟೆಗೆ ಒದ್ದು ಮಗುವನ್ನು ಕೊಂದಿದ್ದನಂತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net