ಹೆತ್ತವಳಿಗೇ ಚಪ್ಪಲಿಯಲ್ಲಿ ಬಾರಿಸಿದ ಮಗ! ವಿಡಿಯೋ ವೈರಲ್ ಆದ ಬೆನ್ನಲ್ಲೇ ಮನೆ ಬಾಗಿಲಿಗೆ ಬಂದರು ಪೊಲೀಸರು

mother
Published on

ಲಖನೌ: ವಿಶ್ವದಲ್ಲಿ ತಾಯಿ ಎನ್ನುವ ಸಂಬಂಧಕ್ಕಿಂತ ಶ್ರೇಷ್ಠವಾದ ಸಂಬಂಧ ಮತ್ತೊಂದಿಲ್ಲ ಎನ್ನುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಹೆತ್ತ ತಾಯಿಗೇ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದೆ. ಮಗ ತಾಯಿಗೆ ಹೊಡೆಯುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮನೆ ಬಾಗಿಲಿಗೆ ಪೊಲೀಸರು ಬರುವಂತಾಗಿದೆ.


ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯ ಗಜ್ರೌಲ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. 40 ವರ್ಷದ ಪ್ರಜಾಪತಿ ತನ್ನ ತಾಯಿಗೆ ಚಪ್ಪಲಿಯಿಂದ ರಪರಪನೆ ಹೊಡೆದಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ರೀತಿ ಹಲ್ಲೆ ಮಾಡಿರುವುದಾಗಿ ಹೇಳಲಾಗಿದೆ. ಅದರ ವಿಡಿಯೋವನ್ನು ಗ್ರಾಮಸ್ಥರು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದು ವೈರಲ್ ಆಗಿದೆ.


ಈ ರೀತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ ಪೊಲೀಸರು ಪ್ರಜಾಪತಿ ವಿರುದ್ಧ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net