ಎಣ್ಣೆಯುಕ್ತ ಚರ್ಮಕ್ಕಾಗಿ ಬಳಸಿ ಈ ಮನೆಮದ್ದು! Beauty tips

beauty-tips-1-691485a99219c
Published on

Beauty tips: ಇಂದಿನ ದಿನಗಳಲ್ಲಿ ಹಲವಾರು ಜನರು ತಮ್ಮ ಮುಖದ ನೈಸರ್ಗಿಕ ಹೊಳಪನ್ನು ಬಯಸುತ್ತಾರೆ. ಅದೇ ರೀತಿ ದುಬಾರಿ ಕ್ರೀಮ್​ಗಳತ್ತ ಮುಖ ಮಾಡುತ್ತಾರೆ. ಆದರೂ, ಯಾವುದೇ ಬದಲಾವಣೆಗಳು ಸಾಧ್ಯವಾಗುವುದಿಲ್ಲ. ಇದರಿಂದ ಬೇಸತ್ತು ಸೌಂದರ್ಯ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಆದರೆ, ಈ ಚಿಕಿತ್ಸೆಗಳು ಮತ್ತು ಕ್ರೀಮ್‌ಗಳು ಎಲ್ಲರಿಗೂ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾವು ಮನೆಯಲ್ಲಿಯೇ ತಯಾರಿಸಿದ ಈ ಮನೆಮದ್ದುಗಳನ್ನು ಬಳಸುವುದರಿಂದ ಚರ್ಮವು ಹೊಳೆಯುತ್ತದೆ. ಹಾಗಿದ್ದರೆ ಈ ಫೇಸ್​ ಪ್ಯಾಕ್​ ಹಚ್ಚಿಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನೋಡೋಣ ಬನ್ನಿ..

ಬೀಟ್​ರೂಟ್​ ಬೆಟಾಲೈನ್​ಗಳು, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದಿಂದ ಕೊಳಕು, ಮಂದತೆ ಮತ್ತು ಟ್ಯಾನಿಂಗ್ ಅನ್ನು ತೆಗೆದುಹಾಕುತ್ತದೆ. ಚರ್ಮವನ್ನು ನುಣುಪಾಗಿಸುತ್ತದೆ. ಹಾಗೆಯೇ ಅಲೊವೆರಾ ಚರ್ಮವನ್ನು ತಣ್ಣಗಾಗಿಸಿ, ಹೈಡ್ರೇಟ್​ ಮಾಡುತ್ತದೆ. ಇದು ಸನ್​ ಟ್ಯಾನ್​ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಾಡುವ ವಿಧಾನ

ಒಂದು ಬೀಟ್ರೂಟ್ ತೆಗೆದುಕೊಂಡು ಅದರಲ್ಲಿರುವ ಸಿಪ್ಪೆ ತೆಗೆದು ರುಬ್ಬಿಕೊಳ್ಳಿ. ಅದಕ್ಕೆ ಸ್ವಚ್ಛವಾದ ಅಲೊವೆರಾ ಜೆಲ್​ ಹಾಗೂ 1 ಚಮಚ ರೋಸ್​ ವಾಟರ್​ನ್ನು ಸೇರಿಸಿ. ಎಣ್ಣೆಯುಕ್ತ ಚರ್ಮವನ್ನು ಹೊಂದಿರುವವರು ಈ ಮಿಶ್ರಣಕ್ಕೆ ಸ್ವಲ್ಪ ಕಡಲೆ ಹಿಟ್ಟು, ಅಥವಾ ಮುಲ್ತಾನಿ ಮಿಟ್ಟಿ ಸೇರಿಸಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಈ ಫೇಸ್ ಪ್ಯಾಕ್ ಅನ್ನು ನೀವು ವಾರಕ್ಕೆ 2 ರಿಂದ 3 ಬಾರಿ ಬಳಸಬಹುದು. ಇದರಿಂದ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ಇದು ಚರ್ಮವನ್ನು ಆರೋಗ್ಯಕ್ಕಾಗಿ, ಯಾವುದೇ ಬಿರುಕು ಮೂಡದಂತೆ ತಡೆಯುತ್ತದೆ. ಈ ಫೇಸ್​ಪ್ಯಾಕ್​ ಬಳಸಿದ ನಂತರ ಉತ್ತಮ ಮಾಯಿಶ್ಚರೈಸರ್ ಅನ್ನು ಹಚ್ಚಿರಿ. ಇದು ಮುಖದ ಸೌಂದರ್ಯವನ್ನು ಇನ್ನಷ್ಟು ಜಾಸ್ತಿ ಮಾಡುತ್ತದೆ.

ಈ ಪರಿಹಾರವು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದರೂ, ತುಂಬಾ ಸೂಕ್ಷ್ಮ ಚರ್ಮ ಹೊಂದಿರುವವರು ಮೊದಲು ಮುಖಕ್ಕೆ ಈ ಮನೆಮದ್ದು ಹೊಂದುತ್ತದೆಯೇ ಎಂದು ಪರೀಕ್ಷೆ ಮಾಡಿಕೊಳ್ಳಬೇಕು. ದಿನ 7-8 ಗಂಟೆ ನಿದ್ರೆ ಮಾಡುವುದು, ನೀರು ಕುಡಿಯುವುದು, ಪೌಷ್ಟಿಕ ಆಹಾರವನ್ನು ಸೇವಿಸುವುದು ಉತ್ತಮವಾಗಿದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net