

ಬೆಂಗಳೂರು: ಆರ್‌ಎಸ್‌ಎಸ್‌ನವರು ಗಲಭೆ ಎಬ್ಬಿಸುತ್ತಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣ(Use of RSS word disrupts proceedings; BJP creates ruckus, uproar in the House)ವಾಗಿ ಎರಡು ಕಲಾಪ ಬಾರಿ ಮುಂದೂಡಲಾಯಿತು.
ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಕುರಿತು ಉತ್ತರಿಸುವ ವೇಳೆ ಸಿಎಂ ಸಿದ್ದರಾಮಯ್ಯ ಆರ್.ಎಸ್.ಎಸ್‌ನವರು ಗಲಭೆ ಎಬ್ಬಿಸುತ್ತಾರೆ ಎಂಬ ಮಾತು ಬಿಜೆಪಿ ಸದಸ್ಯರನ್ನು ಕೆರಳಿಸಿತು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ ಎಂದು ಸಮರ್ಥಿಸಿಕೊಳ್ಳುವ ವೇಳೆ ಸಿಎಂ ಸಿದ್ದರಾಮಯ್ಯ, ಅಪರಾಧ ಹೆಚ್ಚಾಗಿ ಮಾಡೋರೇ ನೀವು, ಆರ್‌ಎಸ್‌ಎಸ್‌ನವರು ಎಂದು ಆರೋಪಿಸಿದರು. ಈ ವೇಳೆ, ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ನಾವು, ನಮ್ಮ ಪ್ರಧಾನಿ, ಕೇಂದ್ರ ಗೃಹ ಸಚಿವರು ಆರ್‌ಎಸ್‌ಎಸ್‌ನವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸಿಎಂ ಸಿದ್ದರಾಮಯ್ಯ, ದ್ವೇಷದ ರಾಜಕಾರಣ ಮಾಡೋರೇ ನೀವು, ದ್ವೇಷದ ಭಾಷಣ ಮಾಡೋರೇ ನೀವು. ಹಿಂಸೆಯ, ದ್ವೇಷದ ರಾಜಕಾರಣಕ್ಕೆ ಅವಕಾಶ ಕೊಡಲ್ಲ, ಹತ್ತಿಕ್ಕುತ್ತೇವೆ ಎಂದು ತಿರುಗೇಟು ನೀಡಿದರು. ಈ ವೇಳೆ ಬಿಜೆಪಿ ಸದಸ್ಯರು ಹಾಗೂ ಆಡಳಿತ ಸದಸ್ಯರ ಮಧ್ಯೆ ತೀವ್ರ ವಾಗ್ಯುದ್ಧ ನಡೆಯಿತು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಸದಸ್ಯರು, ಪಿಎ್ಐ ಕೇಸ್ ವಾಪಸ್ ಪಡೆದವರು ಕಾಂಗ್ರೆಸ್ ನವರು ಎಂದು ೋಷಣೆ ಕೂಗಿದರು.
ಸಿಎಂ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಆರ್.ಅಶೋಕ್, ಆರ್‌ಎಸ್‌ಎಸ್ ಬಗ್ಗೆ ಸಿಎಂ ಆಡಿದ ಮಾತನ್ನು ಕಡತದಿಂದ ತೆಗೆದು ಹಾಕಬೇಕು. ಇಲ್ಲದಿದ್ದರೆ ನಾವು ಸದನ ನಡೆಯಲು ಬಿಡಲ್ಲ ಎಂದು ಪಟ್ಟು ಹಿಡಿದರು. ಕಾಂಗ್ರೆಸ್ ನವರು ಪಿಎ್ಐ ಏಜೆಂಟರು, ಪಾಕ್ ಏಜೆಂಟರು ಎಂದು ಕರೆಯಬಹುದೆ?, ಆಗ ಸುಮ್ಮನಿರುತ್ತೀರಾ ನೀವು ಎಂದು ಅಶೋಕ್ ಪ್ರಶ್ನಿಸಿದರು. ಈ ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ ನಡೆದು ಪರಿಸ್ಥಿತಿ ಕೋಲಾಹಲ ಸೃಷ್ಟಿಸಿತು. ಪರ-ವಿರುದ್ಧ ೋಷಣೆ ಕೂಗಿದ್ದರಿಂದ ಯಾರು ಏನು ಮಾತನಾಡುತ್ತಾರೆ ಎಂಬುದೇ ತಿಳಿಯದಂತಾಗಿತ್ತು. ಗದ್ದಲ ತೀವ್ರತೆಯ ಕಾರಣ ಸದನವನ್ನು ಹತ್ತು ನಿಮಿಷ ಮುಂದೂಡಲಾಯಿತು.
ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಭಾರತ್ ಮಾತಾಕಿ ಜೈ, ಜೈ ಶ್ರೀರಾಮ್ ಘೋಷಣೆ ಕೂಗುತ್ತ್ತ ಒಳಬಂದರು. ಈ ವೇಳೆ, ರಾಷ್ಟ್ರಧ್ವಜ ಹಿಡಿದು ಕಾಂಗ್ರೆಸ್ ಸದಸ್ಯರು ಕೌಂಟರ್ ಕೊಟ್ಟರು.
ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಏನು ಸಾಂವಿಧಾನಿಕ ಸಂಸ್ಥೆನಾ?. ಯಾಕೆ ಮಾತಾಡಬಾರದು ಎಂದು ಪ್ರಶ್ನಿಸಿದರು.
ಈ ವೇಳೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಚೀನಾದ ಚಮಚಗಳು, ಪಾಕಿಸ್ತಾನದ ಏಜೆಂಟರು ಎನ್ನುತ್ತೇವೆ ಎಂದು ಕಾಂಗ್ರೆಸ್‌ಗೆ ಬಿಜೆಪಿಯ ಸುನೀಲ್ ಕುಮಾರ್ ಟಾಂಗ್ ಕೊಟ್ಟರು.
ಈ ವೇಳೆ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ, ಬಿಜೆಪಿ ಸದಸ್ಯ ಮೊಬೈಲ್ ವಿಡಿಯೋ ಮಾಡುತ್ತಿರುವುದಾಗಿ ಆರೋಪಿಸಿ, ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದರು. ಸಚಿವ ಎಚ್.ಕೆ.ಪಾಟೀಲ ಅದನ್ನು ಬೆಂಬಲಿಸಿದರು.
ಈ ಮಧ್ಯೆ ಬಿಜೆಪಿಯ ಡಾ.ಅಶ್ವತ್ಥನಾರಾಯಣ, ರಾಷ್ಟ್ರಧ್ವಜವನ್ನು ಕೆಲ ಕಾಂಗ್ರೆಸ್ ಸದಸ್ಯರು ತಂದಿದ್ದಾರೆ. ಮುದುಡಿ ಅಗೌರವ ತೋರಿದ್ದಾರೆ. ಈ ಗ್ಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಸದನಕ್ಕೆ ರಾಷ್ಟ್ರಧ್ವಜ ತಂದ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ಆಗಲಿ ಎಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದರು.
ಈ ಗಲಾಟೆ ಕಾರಣ ಮತ್ತೆ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಬಳಿಕ ಸ್ಪೀಕರ್ ಯು.ಟಿ.ಖಾದರ್ ಸಮ್ಮುಖದಲ್ಲಿ ಸಂಧಾನ ನಡೆಸಲಾಯಿತು. ಕಲಾಪ ಪುನರಾರಂಭಿಸುತ್ತಿದ್ದಂತೆ ಸ್ಪೀಕರ್, ಆಡಳಿತ ಹಾಗೂ ಪ್ರತಿಪಕ್ಷಗಳಿಂದ ಕೆಲ ಅಸಂವಿಧಾನಿಕ ಪದ, ಆರೋಪಿಸುವ ಪದ ಬಳಕೆಯಾಗಿದೆ. ಆ ಎಲ್ಲ ಪದಗಳನ್ನು ಕಡತದಿಂದ ತೆಗೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಲಾಪ ನಿಯಂತ್ರಣಕ್ಕೆ ಬಾರದೇ ಇದ್ದಾಗ ಸಭಾಧ್ಯಕ್ಷರ ಪೀಠದಲ್ಲಿದ್ದ ಶಿವಲಿಂಗೇಗೌಡರು ಎರಡು ಬಾರಿ ಎದ್ದು ನಿಂತು ಸಭಾಧ್ಯಕ್ಷರು ಎದ್ದು ನಿಂತಾಗ ಎಲ್ಲರೂ ಎಲ್ಲರೂ ಕುಳಿತುಕೊಳ್ಳಬೇಕು ಎಂದು ಆದೇಶ ಕೊಟ್ಟರು. ಆಗ ಎಲ್ಲರೂ ಕುಳಿತರು.