

ಭದ್ರಾವತಿ: ಗಾಂಧಿ ಜಯಂತಿ ಅಂಗವಾಗಿ ತಾಲೂಕು ಬಿಜೆಪಿ ಮಂಡಲದಿಂದ ಗಾಂಧಿ ವೃತ್ತದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗಾಂಧಿ ಜಯಂತಿ ಹಾಗೂ ಲಾಲ್ ಬಹದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಮಾತನಾಡಿ, ಅಹಿಂಸಾ ಮಾರ್ಗ ಅನುಸರಿಸಿದ ಗಾಂಧೀಜಿ ಅವರು ಇಡೀ ಜಗತ್ತಿಗೆ ಸತ್ಯದ, ಶಾಂತಿಯ ಸಂದೇಶ ಸಾರಿದರು. ಗೋಸಂರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆ ಮೂಲಕ ದೇಶದ ಆರ್ಥಿಕತೆ ಹೆಚ್ಚಿಸಲು ಮುನ್ನುಡಿ ಬರೆದರು ಎಂದರು.
ಖಾದಿ ಗ್ರಾಮೋದ್ಯೋಗ ಭವನದಲ್ಲಿ ಕಾರ್ಯಕರ್ತರು ಖಾದಿ ಬಟ್ಟೆ ಖರೀದಿಸಿದರು. ಪ್ರಧಾನ ಕಾರ್ಯದರ್ಶಿ ಚನ್ನೇಶ್, ಮೊಸರಳ್ಳಿ ಅಣ್ಣಪ್ಪ, ಮುಖಂಡರಾದ ಮಂಗೋಟೆ ರುದ್ರೇಶ್, ಕೆ.ಎಚ್.ತೀರ್ಥಯ್ಯ, ರಾಜಶೇಖರ್, ಧನುಷ್, ಆನಂದಕುಮಾರ್, ಸರಸ್ವತಿ, ಕಾ.ರಾ.ನಾಗರಾಜ್, ಸುಲೋಚನಾ, ಮಂಜುಳಾ, ನಟರಾಜ್, ಬಸವರಾಜ್, ರವಿಕುಮಾರ್ ಇತರರಿದ್ದರು.