

ವಾಷಿಂಗ್ಟನ್: ತಾನು ಆರ್ಡರ್ ಮಾಡಿದ ಕಾಫಿ 1 ಗಂಟೆಯಾದರೂ ನೀಡಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಮೆಕ್ಡೊನಾಲ್ಡ್ಸ್ ಸಿಬ್ಬಂದಿ ಮೇಲೆ ಬಿಸಿ ಕಾಫಿ (Hot Coffee) ಎರಚಿದ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದ್ದು, ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ ಆಗಿದೆ.
ಬ್ಯೂನಾ ವಿಸ್ಟಾ ಪೊಲೀಸ್ ಇಲಾಖೆ ಹಂಚಿಕೊಂಡಿರುವ ವೀಡಿಯೊದಲ್ಲಿ, ಮಹಿಳೆ ಮಿಚಿಗನ್ ಅಂಗಡಿ ವ್ಯವಸ್ಥಾಪಕರೊಂದಿಗೆ ವಾಗ್ವಾಧ ನಡೆಸುತ್ತಿದ್ದಾಳೆ. ಸಿಬ್ಬಂದಿ ಆ ಮಹಿಳೆಯನ್ನು ಎಷ್ಟೇ ಮನವೊಲಿಸಲು ಪ್ರಾರಂಭಿಸಿದರೂ, ಆಕೆ ಶಾಂತಗೊಳ್ಳದೇ ವಾದ ಮಾಡುತ್ತಿರುವುದನ್ನು ತೋರಿಸಲಾಗಿದೆ.
ಆರೋಪಿ ಮಹಿಳೆಯು ಸಿಬ್ಬಂದಿಯನ್ನು ಕೂಗುತ್ತಾ ಸುಳ್ಳುಗಾರ ಎಂದು ಕರೆಯುವುದರೊಂದಿಗೆ ಜಗಳ ಪ್ರಾರಂಭವಾಗುತ್ತದೆ. ಅದಕ್ಕೆ ಪ್ರತಿಕ್ರಿಯಿಸಿದ ಮ್ಯಾನೇಜರ್ ನಿಮ್ಮ ಕಾಫಿ ಬಂದಿದೆ. ಇದಕ್ಕೆ ಶುಲ್ಕ ವಿಧಿಸಲಾಗಿದೆ. ನಿನ್ನ ಮರುಪಾವತಿಗೆ 48 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ ಎಂದು ಹೇಳಿ ತಿರುಗಿದ್ದಾಳೆ. ಇದಕ್ಕೆ ಕೋಪಗೊಂಡ ಮಹಿಳೆಯು ಬಿಸಿ ಕಾಫಿಯನ್ನು ಸಿಬ್ಬಂದಿ ಬೆನ್ನಿನ ಮೇಲೆ ಎರಚಿದ್ದಾಳೆ.
ಪೊಲೀಸರು ಆ ಗ್ರಾಹಕನನ್ನು ಕ್ಯಾಶರಾ ಬ್ರೌನ್ (48) ಎಂದು ಗುರುತಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆತಂಕಕಾರಿ ವಿಡಿಯೋ ಪೋಸ್ಟ್ ಮಾಡಿದ ನಂತರ ಆಕೆಯ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಬ್ರೌನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅವಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಶಿಕ್ಷೆ ವಿಧಿಸಬೇಕು ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ಇಂತಹ ವ್ಯಕ್ತಿಯೊಂದಿಗೆ ವ್ಯವಹರಿಸಲು ಯಾವುದೇ ಮೆಕ್ಡೊನಾಲ್ಡ್ಸ್ ಮ್ಯಾನೇಜರ್ಗೆ ಅಧಿಕ ಸಂಪಾದನೆ ಇರುವುದಿಲ್ಲ ಎಂದು ನಾನು ಭರವಸೆ ನೀಡಬಲ್ಲೆ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)