ರೂಮ್‌ಮೇಟ್‌ ಹತ್ಯೆಗೈದು ಪರಾರಿ: ಸ್ವಂತ ಡಿಎನ್‌ಎ ಅಳಿಸಲು ಕೂಲ್​ಡ್ರಿಂಕ್​ ಬಳಸಿದ ಮಹಿಳೆ..

DNA
Published on

ಯುನೈಟೆಡ್ ಸ್ಟೇಟ್ಸ್‌: ರೂಮ್‌ಮೇಟ್​ ಹತ್ಯೆಗೈದು ಸ್ವಂತ ಡಿಎನ್‌ಎ ಅಳಿಸಲು ಮಹಿಳೆಯೊಬ್ಬಳು ತನ್ನ ಮೇಲೆ ಮೌಂಟೇನ್​ ಡಿವ್​​ ಕೂಲ್ಡ್ರಿಂಕ್​ ಸುರಿದುಕೊಂಡಿರುವ ವಿಚಿತ್ರ ಘಟನೆ ಯುನೈಟೆಡ್ ಸ್ಟೇಟ್ಸ್‌ ನಡೆದಿದೆ.

ನಿಕೋಲ್ ಮ್ಯಾಕ್ಸ್(35) ಎಂಬಾಕೆ ತನ್ನೊಡನೆ ವಾಸಿಸುತ್ತಿದ್ದ 79 ವರ್ಷದ ರೂಮ್‌ಮೇಟ್‌ನನ್ನು ಮನಬಂದಂತೆ ಥಳಿಸಿ ನಂತರ ಇರಿದು ಕೊಂದಿದ್ದಾಳೆ. ನಂತರ ಸಾಕ್ಷ್ಯವನ್ನು ಮರೆಮಾಚಲು ಮನೆಗೆ ಬೆಂಕಿ ಹಚ್ಚಿ ಸ್ಥಳದಿಂದ ಓಡಿಹೋದಳು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ವ್ಯಕ್ತಿಯೊಬ್ಬರು ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ.ಮೃತ ವ್ಯಕ್ತಿಯ ತಲೆಯ ಹಿಂಭಾಗದಲ್ಲಿ ಪೆಟ್ಟಾಗಿದೆ ಅಲ್ಲದೇ ಆತನ ಮುಂಡದಲ್ಲಿ ಇರಿತದ ಗಾಯಗಳಿದ್ದು ಗುರುತು ಇನ್ನು ಪತ್ತೆಯಾಗಿಲ್ಲ.

ಪೊಲೀಸರು ಮೃತದೇಹದ ಬಳಿಯ ರಕ್ತಸಿಕ್ತ ಚಾಕು ಮತ್ತು ಎರಡು ಸೆಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮನೆಯ ಮಾಲೀಕರು ಘಟನೆ ಬಗ್ಗೆ ಕೇಳಿದ್ದು ಆತ ನಿಕೋಲ್​ ಬಗ್ಗೆ ತಿಳಿಸಿದ್ದಾನೆ. ಕೂಡಲೇ ಅಲರ್ಟ್​ ಆಗಿರುವ ಅಧಿಕಾರಿಗಳು ರೆಸ್ಟೋರೆಂಟ್‌ನ ಹೊರಗೆ ಮಹಿಳೆಯನ್ನು ಬರಿಗಾಲಿನಲ್ಲಿ ನೋಡಿದ್ದು, ಮೃತ ವ್ಯಕ್ತಿ ಬಗ್ಗೆ ಕೇಳಿದ್ದಾರೆ. ಅವಳು ಆತನ ಬಗ್ಗೆ ಗೊತ್ತಿಲ್ಲ, ತಾನು ನಿರಾಶ್ರಿತಳು ಎಂದು ಹೇಳಿದ್ದಾಳೆ.

ಕೊನೆಗೆ ಪೊಲೀಸರು ಅವಳನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡು, ಆಕೆಯ ಡಿಎನ್‌ಎ ಮಾದರಿಯನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ವೇಳೆ ಆಕೆ ತನಗೆ ಕುಡಿಯಲು ಡಯಟ್ ಮೌಂಟೇನ್ ​ಡಿವ್ ನೀಡುವಂತೆ ಕೇಳಿ ಪಡೆದಿದ್ದಾಳೆ. ತದನಂತರ ಆಕೆ ಡ್ಯೂವನ್ನು ಕುಡಿಯುವಂತೆ ನಟಿಸಿ ಮೈಮೇಲೆ ಸುರಿದುಕೊಂಡಿದ್ದಾಳೆ. ಆದಾಗ್ಯೂ, ಆಕೆಯ ಡಿಎನ್‌ಎ ಮೃತದೇಹದ ದೇಹದ ಪಕ್ಕದಲ್ಲಿ ಬಿದ್ದಿದ್ದ ಚಾಕುವಿನ ಹಿಡಿಕೆಯಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ದೃಷ್ಟಿದೋಷ ಶಿಕ್ಷಕನನ್ನು ತರಗತಿಯಲ್ಲೇ ಅವಮಾನಿಸಿದ ವಿದ್ಯಾರ್ಥಿಗಳು..

ಸದ್ಯ, ಮಹಿಳೆಯನ್ನು ಬಂಧನದಲ್ಲಿ ಇರಿಸಲಾಗಿದ್ದು, ಸೆಪ್ಟೆಂಬರ್ 5ರಂದು ನ್ಯಾಯಾಲಯಕ್ಕೆ ಹಾಜರಾಗಲು ನಿಗದಿಪಡಿಸಲಾಗಿದೆ. ನಾರ್ತ್ ಕೆರೊಲಿನಾ ಸ್ಟೇಟ್ ಯೂನಿವರ್ಸಿಟಿಯ ಇತ್ತೀಚಿನ ಅಧ್ಯಯನವು ಡಯಟ್ ಮೌಂಟೇನ್ ಡ್ಯೂ ಮತ್ತು ಇತರ ಸೋಡಾಗಳಲ್ಲಿ ಕಂಡುಬರುವ ಸಾಮಾನ್ಯ ಕೃತಕ ಸಿಹಿಕಾರಕವಾದ ಸುಕ್ರಲೋಸ್ ಡಿಎನ್‌ಎಯನ್ನು ರೂಪಿಸುವ ಆನುವಂಶಿಕ ವಸ್ತುಗಳನ್ನು ಒಡೆಯುತ್ತದೆ ಎಂದು ಸೂಚಿಸಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net