

ವಾಷಿಂಗ್ಟನ್: ವಯಸ್ಸು 78 ಆದರೂ ಜೋ ಬೈಡನ್ ಅವರು ಅಮೆರಿಕ ಅಧ್ಯಕ್ಷರಾದ ಮೇಲೆ ಸದಾ ಲವಲವಿಕೆಯಿಂದ ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಅವರು ಸಮಯ ಸಿಕ್ಕಾಗ ತಮ್ಮ ಭಾವನೆಗಳನ್ನು ಮುಲಾಜಿಲ್ಲದೇ ವ್ಯಕ್ತಪಡಿಸುತ್ತಾರೆ.
ಜೋ ಬೈಡನ್ ಅವರು ಸಕತ್ ರೋಮ್ಯಾಂಟಿಕ್ ಆಗಿ ಕಂಡು ಬಂದ ಘಟನೆ ಅವರ ಪತ್ನಿ ಜಿಲ್ ಬೈಡನ್ ಅವರ ನಡುವೆ ನಡೆದಿದೆ. ಗುರುವಾರ ವಾಷಿಂಗ್ಟನ್ನ ತಮ್ಮ ಅಧಿಕೃತ ನಿವಾಸ ವೈಟ್ಹೌಸ್ನಿಂದ ನಿಗದಿತ ಕಾರ್ಯಕ್ರಮಕ್ಕೆ ತೆರಳುವಾಗ ಜೋ ಬೈಡನ್ ಅವರಿಗೆ ಹೆಂಡತಿಯ ಮೇಲೆ ಪ್ರೀತಿ ಉಕ್ಕಿ ಹರಿದಿದ್ದು, ಹೆಲಿಕಾಪ್ಟರ್ ಹತ್ತುವ ವೇಳೆ ಹುಲ್ಲುಹಾಸಿನ ಮೇಲೆ ಬೆಳೆದಿದ್ದ ಹೂವನ್ನು (dandelion flower) ಹೆಂಡತಿಗೆ ನೀಡಿ 'ಲವ್ ಯು' ಎಂದು ಹೇಳಿದ್ದಾರೆ.
ಜೋ ಅವರ ಈ ಅನಿರೀಕ್ಷಿತ ಪ್ರೀತಿಗೆ ಪತ್ನಿ ಜಿಲ್ ಅವರು ನಾಚಿ ನೀರಾಗಿದ್ದಾರೆ. ಗಂಡನ ಪ್ರೀತಿಯನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋ ಸಖತ್ ವೈರಲ್ ಆಗಿದೆ.
ಇನ್ನು ಜೋ ಬೈಡನ್ ಅವರು ಜಿಲ್ ಬೈಡನ್ ಅವರನ್ನು 1977 ರಲ್ಲಿ ಮದುವೆಯಾಗಿದ್ದಾರೆ. ಇದು ಅವರಿಗೆ ಎರಡನೇ ಮದುವೆ.