

ಅಹಮದಾಬಾದ್: ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲು ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.
ಏರ್ಪೋರ್ಟ್ನಲ್ಲಿ ಸಾಂಪ್ರದಾಯಿಕ ಸ್ವಾಗತಕ್ಕೆ ಭಾಜನರಾದ ಟ್ರಂಪ್ ಮತ್ತು ಅವರ ಕುಟುಂಬದವರು ಈಗ ಸಬರಮತಿ ಆಶ್ರಮದತ್ತ ಪ್ರಯಾಣ ಬೆಳೆಸಿದ್ದಾರೆ.
ಸುಮಾರು 22 ಕಿ.ಮೀ.ಗಳಷ್ಟು ದೂರ ಒಟ್ಟಾಗಿ ರೋಡ್ ಶೋ ನಡೆಸಲಿರುವ ಎರಡೂ ದೇಶಗಳ ನಾಯಕರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಭರ್ಜರಿ ಜನರು ನೆರೆದಿದ್ದಾರೆ. ಬಿಗಿ ಭದ್ರತೆಯೊಂದಿಗೆ ರೋಡ್ ಶೋ ಪ್ರಾರಂಭವಾಗಿದೆ. ಜನರು ನಾಯಕರತ್ತ ಕೈ ಬೀಸುತ್ತಿದ್ದಾರೆ. ಫೋಟೋ ತೆಗೆದುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)