ನೊಬೆಲ್​ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಹೆಸರು ನಾಮನಿರ್ದೇಶನ !

Trump 2 Jul 20
Published on

ಒಸ್ಲೋ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು 2021ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ. ನಾರ್ವೇ ರಾಷ್ಟ್ರದ ಸಂಸತ್​ ಸದಸ್ಯ ಕ್ರಿಸ್ಟಿಯನ್​ ಟೈಬ್ರಿಗ್​-ಜೆಡ್ಡೆ ಅವರು ಈ ನಾಮನಿರ್ದೇಶನ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್​ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್​ ಶಾಂತಿ ಒಪ್ಪಂದ ಏರ್ಪಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದನ್ನು ಗಮನದಲ್ಲಿರಿಸಿಕೊಂಡು ಜೆಡ್ಡೆ ಈ ನಾಮನಿರ್ದೇಶನ ಮಾಡಿದ್ದಾರೆ ಎಂದು ಡಿಡಬ್ಲ್ಯು ನ್ಯೂಸ್ ವರದಿ ಮಾಡಿದೆ.

ಜೆಡ್ಡೆ ನಾರ್ವೇ ಸಂಸತ್ತಿನ ನಾಲ್ಕು ಅವಧಿಯ ಸದಸ್ಯರಾಗಿದ್ದು, ನ್ಯಾಟೋ ಪಾರ್ಲಿಮೆಂಟರಿ ಅಸೆಂಬ್ಲಿಯಲ್ಲಿ ನಾರ್ವೇಯನ್ ಡೆಲಿಗೇಶನ್​ನ ಮುಖ್ಯಸ್ಥರಾಗಿದ್ದಾರೆ. ಫಾಕ್ಸ್ ನ್ಯೂಸ್ ಜತೆಗೆ ಮಾತನಾಡುತ್ತ ಅವರು ಇಸ್ರೇಲ್​-ಯುಎಇ ಶಾಂತಿ ಒಪ್ಪಂದ ಪ್ರಕ್ರಿಯೆಯಲ್ಲಿ ಟ್ರಂಪ್ ಪಾತ್ರ ಪ್ರಮುಖವಾದುದು. ಇದೇ ಕಾರಣಕ್ಕೆ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net