ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ತಪ್ಪಿದ ನೊಬೆಲ್ ಶಾಂತಿ ಪ್ರಶಸ್ತಿ; ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದೇನು? ಇಲ್ಲಿದೆ ನೋಡಿ| Vladimir Putin

ವಿಜಯವಾಣಿ (22)
Published on

Vladimir Putin: ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನೊ ಮಚಾದೊ ಅವರು 2025ರ ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದಿದ್ದು, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಈ ಕುರಿತು ನೊಬೆಲ್ ಆಕಾಡೆಮಿಯನ್ನು ಟೀಕಿಸಿರುವ ಶ್ವೇತಭವನ ಶಾಂತಿಗಿಂತ ರಾಜಕೀಯವನ್ನೇ ಅದು ಇರಿಸಿದೆ ಎಂದು ಕಿಡಿಕಾರಿದೆ.

ಇನ್ನು ಟ್ರಂಪ್​ಗೆ ಅವರಿಗೆ ಪ್ರಶಸ್ತಿ ತಪ್ಪಿದ್ದರ ಬಗ್ಗೆ ಶುಕ್ರವಾರ(ಅ. 10) ಪ್ರತಿಕ್ರಿಯಿಸಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷರ ಶಾಂತಿ ಪ್ರಯತ್ನಗಳನ್ನು ಶ್ಲಾಘಿಸಿದರು. ಟ್ರಂಪ್ ಅವರು ಶಾಂತಿಗಾಗಿ ಬಹಳಷ್ಟು ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಮಧ್ಯಪ್ರಾಚ್ಯದ ಕದನ ವಿರಾಮಗಳನ್ನು ಉಲ್ಲೇಖಿಸಿ ಟ್ರಂಪ್ ಅವರನ್ನು ಶ್ಲಾಘಿಸಿದ್ದು, ಆದರೆ ಅವರು ನೊಬೆಲ್ ಪ್ರಶಸ್ತಿಗೆ ಅರ್ಹರೇ ಎಂದು ನಿರ್ಣುಯಿಸುವುದು ನಮ್ಮ ಅಧಿಕಾರವಲ್ಲ. ಗಾಜಾ ಶಾಂತಿ ಒಪ್ಪಂದ ಯಶಸ್ವಿಯಾದರೆ ಅದಕ್ಕಿಂತ ಐತಿಹಾಸಿಕ ಸಾಧನೆ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.

ದಕ್ಷಿಣ ಅಮೆರಿಕಾದ ದೇಶದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ನಡೆಸಿದ ಹೋರಾಟಕ್ಕಾಗಿ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನೊ ಮಚಾದೊ ಅವರು 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net