VIDEO: ಭಾರತ ಭೇಟಿ ಬಗ್ಗೆ ಉತ್ಸುಕನಾಗಿದ್ದೇನೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟ ಕಾರಣವೇನು?

Trump 19 FEB 20
Published on

ವಾಷಿಂಗ್ಟನ್​: ಭಾರತ ಪ್ರವಾಸದ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ವಿಡಿಯೋ ಹೇಳಿಕೆಯೊಂದನ್ನುನೀಡಿದ್ದಾರೆ. ಅದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಮೋದಿ ಹೇಳಿರುವ ಮಾತುಗಳನ್ನು ಸ್ಮರಿಸಿಕೊಂಡು ಪುಳಕಿತರಾಗಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಿಷ್ಟು- ಭಾರತದ ಜತೆಗೆ ನಮಗೆ ವಾಣಿಜ್ಯ ಒಪ್ಪಂದವಿದೆ. ಆದರೆ ಇದು ನಿಜಕ್ಕೂ ಚುನಾವಣೆಗೂ ಮೊದಲೇ ಆಗಬಹುದಾಗಿರುವ ಬಿಗ್ ಡೀಲ್. ಪ್ರಧಾನಿ ಮೋದಿಯವರನ್ನು ಮೆಚ್ಚಲೇ ಬೇಕು. ವಿಮಾನ ನಿಲ್ದಾಣದಿಂದ ಸ್ಟೇಡಿಯಂ ತನಕ 70 ಲಕ್ಷ ಜನ ನಮ್ಮನ್ನು ಬರಮಾಡಿಕೊಳ್ಳುತ್ತಿರುವುದು ಪುಳಕ ಉಂಟುಮಾಡುವ ವಿಚಾರ.

ಟ್ರಂಪ್ ಅವರ ಭಾರತ ಭೇಟಿ ಫೆಬ್ರವರಿ 24-25ರಂದು ನಡೆಯಲಿದ್ದು, ನವದೆಹಲಿ, ಅಹಮದಾಬಾದ್​ಗಳಿಗೆ ತೆರಳಲಿದ್ದಾರೆ. ವಿವಿಧ ಕಾರ್ಯಕ್ರಮಗಳನ್ನು ಸರ್ಕಾರ ಈ ನಿಟ್ಟಿನಲ್ಲಿ ಹಮ್ಮಿಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿ ಟ್ರಂಪ್ ಅವರ ಮಾತುಗಳಲ್ಲಿ ಉತ್ಸುಕತೆ ಕಂಡುಬರುತ್ತಿದ್ದು, ಪೂರ್ಣ ಮಾತುಗಳನ್ನು ಕೇಳಲು ಕೆಳಗಿನ ವಿಡಿಯೋ ನೋಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net