ಅಮೆರಿಕದಿಂದ ಭಾರತಕ್ಕೆ ದಿಗ್ಬಂಧನ?

Ind Ame
Published on

ವಾಷಿಂಗ್ಟನ್: ರಷ್ಯಾದಿಂದ ರಕ್ಷಣಾ ಸಾಧನಗಳನ್ನು ಖರೀದಿಸುವುದಕ್ಕೆ ಭಾರತ ಮಾಡಿಕೊಂಡಿರುವ ಒಪ್ಪಂದ ಕಾರಣ ಅಮೆರಿಕ, ಭಾರತದ ವಿರುದ್ಧ ನಿರ್ಬಂಧ ಹೇರುವ ಸಾಧ್ಯತೆಯಿದೆ ಎಂದು ವರದಿಯೊಂದು ತಿಳಿಸಿದೆ.

ರಷ್ಯಾ ನಿರ್ವಿುತ ಎಸ್-400 ವೈಮಾನಿಕ ರಕ್ಷಣಾ ಸಾಧನಗಳ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಅಸಮಾಧಾನಗೊಂಡ ಅಮೆರಿಕ ಆಡಳಿತ, ಭಾರತದ ಮೇಲೆ ದಿಗ್ಬಂಧನ ವಿಧಿಸಬಹುದು ಎಂದು ಅಮೆರಿಕ ಸಂಸತ್ತಿನ (ಕಾಂಗ್ರೆಸ್) ವರದಿಯೊಂದು ಎಚ್ಚರಿಸಿದೆ. ಕಾಂಗ್ರೆಸ್​ನ ಸಂಶೋಧನಾ ಸೇವೆ (ಸಿಆರ್​ಎಸ್) ಈ ವರದಿಯನ್ನು ಸಿದ್ಧಪಡಿಸಿದೆ.

ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚೆಚ್ಚು ತಂತ್ರಜ್ಞಾನ ಹಂಚಿಕೊಳ್ಳಲು ಹಾಗೂ ಜಂಟಿಯಾಗಿ ಉತ್ಪಾದನೆ ಮಾಡಲು ಭಾರತ ಆಸಕ್ತಿ ತಾಳಿದೆ. ಆದರೆ, ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಹೆಚ್ಚು ಸುಧಾರಣೆಗಳನ್ನು ತರಬೇಕೆಂಬುದು ಅಮೆರಿಕದ ಆಗ್ರಹವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಅಧಿಕ ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಬೇಕೆನ್ನುವುದೂ ಅಮೆರಿಕದ ಒತ್ತಾಯವಾಗಿದೆ. ದಿಗ್ಬಂಧನಗಳ ಮೂಲಕ ಅಮೆರಿಕದ ಪ್ರತಿಸ್ಪರ್ಧಿಗಳನ್ನು ಹಣಿಯುವುದಕ್ಕೆ ಸಂಬಂಧಿಸಿದ ಕಾನೂನಿನ ಅಡಿಯಲ್ಲಿ ಭಾರತದ ವಿರುದ್ಧ ಅಮೆರಿಕ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಐದು ಬಿಲಿಯನ್ ಡಾಲರ್ ಒಪ್ಪಂದ

ಎಸ್-400 ವೈಮಾನಿಕ ಕ್ಷಿಪಣಿ ವ್ಯವಸ್ಥೆ ಖರೀದಿಗಾಗಿ ಭಾರತ 2018 ಅಕ್ಟೋಬರ್​ನಲ್ಲಿ ರಷ್ಯಾದೊಂದಿಗೆ 5 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವನ್ನು ಮುಂದುವರಿಸಿದ್ದೇ ಆದಲ್ಲಿ ದಿಗ್ಬಂಧನ ಎದುರಿಸ ಬೇಕಾದೀತು ಎಂದು ಡೊನಾಲ್ಡ್ ಟ್ರಂಪ್ ಆಡಳಿತ ಎಚ್ಚರಿಸಿದ್ದರೂ ಭಾರತ ಅದಕ್ಕೆ ಸೊಪು್ಪ ಹಾಕಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net