ಎದೆ ಹಾಲಿನ ರುಚಿಯ ಐಸ್ ಕ್ರೀಮ್! ವಿಡಿಯೋ ನೋಡಿ...Breast Milk Ice Cream

Breast Milk Ice Cream
Published on

Breast Milk Ice Cream: ವೆನಿಲ್ಲಾ. ಚಾಕೊಲೇಟ್ ಸೇರಿದಂತೆ ಹಲವು ರುಚಿಗಳಲ್ಲಿ ಐಸ್ ಕ್ರೀಮ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅವರ ನಡುವೆ ಹೊಸ ರುಚಿಯೊಂದಿಗೆ ಮಾರುಕಟ್ಟೆಗೆ ಬರ್ತಿದೆ ಎದೆಹಾಲಿನ ರುಚಿಯಂತೆ ತಯಾರಿಸಲಾದ ಐಸ್​​ ಕ್ರೀಮ್​.

ಅಮೆರಿಕದ ಪ್ರಸಿದ್ಧ ಬೇಬಿ ಬ್ರ್ಯಾಂಡ್ ಫ್ರಿಡಾ ಎದೆಹಾಲು ರುಚಿಯ ಐಸ್ ಕ್ರೀಮ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಹೊಸ ಫ್ರಿಡಾ ಮಾಮ್ 2-ಇನ್-1 ಮ್ಯಾನುಯಲ್ ಬ್ರೆಸ್ಟ್ ಪಂಪ್ ಬಿಡುಗಡೆ ಸಮಾರಂಭದ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯು ಈ ಐಸ್ ಕ್ರೀಮ್ ಘೋಷಿಸಿತು.   ಗರ್ಭಧಾರಣೆಯಂತೆ ಎದೆಹಾಲಿನ ಐಸ್ ಕ್ರೀಂ ಅನ್ನು ಆನಂದಿಸಲು ಬಯಸುವ ಗ್ರಾಹಕರು ಪ್ರಕಟಣೆಯಿಂದ ಒಂಬತ್ತು ತಿಂಗಳು ಕಾಯಬೇಕಾಗುತ್ತದೆ ಎಂದು ಕಂಪನಿ ಹೇಳಿದೆ.

ಈ ಐಸ್ ಕ್ರೀಮ್ ಎದೆ ಹಾಲಿನ ರುಚಿಯನ್ನು ಹೊಂದಿದ್ದು, ಪೌಷ್ಟಿಕವಾಗಿದೆ. ನಿಜವಾದ ಎದೆ ಹಾಲನ್ನು ಬಳಸಲಾಗಿಲ್ಲ. ವಾಣಿಜ್ಯ ಆಹಾರ ಉತ್ಪನ್ನಗಳಲ್ಲಿ ಎದೆ ಹಾಲು ಬಳಸಲು ಅನುಮತಿ ಇಲ್ಲದಿರುವುದರಿಂದ, ಐಸ್ ಕ್ರೀಮ್ ಅನ್ನು ಎದೆ ಹಾಲಿನ ವಿಶೇಷ ಸಿಹಿ, ಸ್ವಲ್ಪ ಉಪ್ಪು ಮತ್ತು ಅಡಿಕೆ ಪರಿಮಳವನ್ನು ಹೊಂದಿರುವ ಸೂತ್ರವನ್ನು ಬಳಸಿ ತಯಾರಿಸಲಾಗುತ್ತದೆ ಎಂದು ಫ್ರಿಡಾ ಹೇಳಿಕೊಂಡಿದೆ.

ಏನೇ ಇರಲಿ, ಎದೆಹಾಲಿನ ಐಸ್ ಕ್ರೀಂ ಸವಿಯಲು ಕಾಯುವವರು ಅನೇಕರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net