ಇದೇ ವೇಳೆ, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಮುಖ್ಯಸ್ಥ ರಫೇಲ್ ಗ್ರೋಸಿ, ಅಮೆರಿಕ-ಇರಾನ್ ನಡುವಿನ ಯಾವುದೇ ಅಂತಿಮ ಒಪ್ಪಂದದಲ್ಲಿ ಬಲಿಷ್ಠ ಪರಿಶೀಲನಾ ವ್ಯವಸ್ಥೆ ಇರಲೇಬೇಕು ಎಂದು ಹೇಳಿದ್ದಾರೆ. ಇರಾನ್ ಅಣ್ವಸ್ತ್ರ ನಿರ್ಮಾಣದ ಉದ್ದೇಶ ಇಲ್ಲ ಎಂದು ಹೇಳಿದ್ದರೂ, ಅದರ ಮಾತಿಗಿಂತ ಅಂತರರಾಷ್ಟ್ರೀಯ ಮಟ್ಟದ ಕಟ್ಟುನಿಟ್ಟಿನ ಪರಿಶೀಲನೆ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧಕ್ಕೂ ಮುನ್ನ ಇರಾನ್ ಬಳಿ ಸುಮಾರು 440 ಕಿಲೋಗ್ರಾಂಗಳಷ್ಟು ಶೇ.60ರಷ್ಟು ಸಮೃದ್ಧೀಕರಿಸಿದ ಯುರೇನಿಯಂ ಸಂಗ್ರಹವಿತ್ತು. ಅದನ್ನು IAEA ಮೇಲ್ವಿಚಾರಣೆಯಲ್ಲಿ ಸುರಕ್ಷಿತ ಮಟ್ಟಕ್ಕೆ ಇಳಿಸುವ ಪ್ರಕ್ರಿಯೆ ಒಪ್ಪಂದದಲ್ಲಿದೆ,(ಏಜೆನ್ಸೀಸ್).