VIDEO| ಉರ್ಫಿ ಜಾವೇದ್ ಹೊಸ ಅವತಾರ; ಮೈಮುಚ್ಚಿಕೊಳ್ಳಲು ಹಾವನ್ನೇ ಬಳಸಿದ ನಟಿ!

Urfi Javed
Published on

ನವದೆಹಲಿ: ಉರ್ಫಿ ಜಾವೇದ್ ಧರಿಸುವ ಚಿತ್ರ-ವಿಚಿತ್ರ ಉಡುಪಿನ ಕಾರಣಕ್ಕಾಗಿ ಆಗಾಗ್ಗೇ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಗ್ಗೆ ಸಂತಸದಿಂದಲೇ ಮಾತನಾಡುವ ಉರ್ಫಿ, ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಾನು ಡ್ರೆಸ್​ ಹಾಕದಿದ್ದರೆ ಅಭಿಮಾನಿಗಳಿಗೆ ತುಂಬಾ ಖುಷಿ, ಅವರನ್ನು ಖುಷಿಪಡಿಸುವುದೇ ನನ್ನ ಉದ್ದೇಶ ಎಂದೂ ಹೇಳಿಕೊಂಡಿದ್ದಳು. ಇದಕ್ಕಾಗಿ ಈಕೆಯನ್ನು ಫ್ಯಾಷನ್​ ಲೋಕದ ದುರಂತ ಎಂದೇ ಟೀಕೆ ಮಾಡಲಾಗುತ್ತಿದೆ.

ನಟಿ ಉರ್ಫಿ ಜಾವೇದ್​ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸದಾ ಸೆನ್ಸೇಷನ್ ಆಗುವಂತಗ ಬಟ್ಟೆಗಳನ್ನು ಧರಿಸಿ ಫೋಟೋಗಳನ್ನು ಇಂಟರ್ನೆಟ್​ನಲ್ಲಿ ಹರಿಬಿಡುತ್ತಾರೆ. ಅಲ್ಲದೇ ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗಲೂ, ವಿಚಿತ್ರ ವಿನ್ಯಾಸದ ಬಟ್ಟೆ ಧರಿಸುತ್ತಾರೆ. ಇದೀಗ ಉರ್ಫಿ ಜಾವೇದ್ ರೇಡಿಯೋ ನಶಾ ಪ್ರಶಸ್ತಿ ಸಮಾರಂಭಕ್ಕೆ ವಿಭಿನ್ನ ಶೈಲಿಯ ಉಡುಪು ತೊಟ್ಟು ಹೋಗಿ ಸುದ್ದಿಯಾಗಿದ್ದಾಳೆ.

ತನ್ನ ಹೊಸ ಶೈಲಿಯ ಉಡುಪು ಧರಿಸಿರುವ ಫೋಟೋವನ್ನು ಉರ್ಫಿ ಜಾವೇದ್ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆಕೆಯ ಅವತಾರ ಕಂಡು ಎಲ್ಲರೂ ಕಮೆಂಟ್ ಮಾಡುತ್ತಿದ್ದಾರೆ. ಜತೆಗೆ ಸಾಕಷ್ಟು ಟ್ರೋಲ್​ಗಳಿಗೂ ಅವಕಾಶ ಮಾಡಿಕೊಟ್ಟಿದ್ದಾಳೆ. ಹಾವಿನ ಆಕಾರದ ಬ್ಯಾಕ್‌ಲೆಸ್ ಬಟ್ಟೆಯನ್ನು ಉರ್ಫಿ ಧರಿಸಿದ್ದಾಳೆ. ಇನ್ಸ್​ಟಾಗ್ರಾಂ ಪೋಸ್ಟ್‌ಗೆ “ನಾಗಿನ್ ಆಡಿಷನ್ ಚಲ್ ರಹೇ ಹೈ ಕ್ಯಾ? ಎಂದು ಬರೆದುಕೊಂಡಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್‌ಗೆ ಸಖತ್‌ ಕ್ರೇಜ್ ಮತ್ತು ಫಾಲೋಯಿಂಗ್ ಇದೆ. ಉರ್ಫಿಯ ಹೊಸ ಅವತಾರ ಕಂಡು, 'ನಾಗಿನ್ ವಿತ್ ಅಮರೀಶ್ ಪುರಿ ಹೇರ್ ಸ್ಟೈಲ್' ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದೀಗ ನಾಗಿನ್‌ ಲುಕ್‌ನಲ್ಲಿರುವ ಉರ್ಫಿ ವೀಡಿಯೋ ವೈರಲ್‌ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net