ಉರ್ಫಿ ಚಿತ್ರ ವಿಚಿತ್ರ ಬಟ್ಟೆ ಧರಿಸುವುದೇಕೆ?; ಕೊನೆಗೂ ರಿವೀಲ್​ ಆಯ್ತು ಸೀಕ್ರೆಟ್

Urfi Javed
Published on

ಮುಂಬೈ: ನಟಿ ಉರ್ಫಿ ಜಾವೇದ್ ಈಗ ಇಂಟರ್​​​ನೆಟ್ ಸೆನ್ಸೇಷನ್ ಆಗಿದ್ದು, ವಿಭಿನ್ನ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ತಮ್ಮ ಎಕ್ಸ್ಪೋಸಿಂಗ್ ಡ್ರೆಸ್ಸಿಂಗ್ ಶೈಲಿಯಿಂದ ಮಾಧ್ಯಮದ ಗಮನ ಸೆಳೆಯುತ್ತಾರೆ. ಎಂದಿಗೂ ತಮ್ಮ ಅಭಿಮಾನಿಗಳಿಂದ ದೂರ ಉಳಿಯದ ಉರ್ಫಿ, ವಿಚಿತ್ರವಾದ ಬಟ್ಟೆಯ ಆಯ್ಕೆಯಿಂದಾಗಿ ಅಂತರ್ಜಾಲದಲ್ಲಿ ಸಾಕಷ್ಟು ಟೀಕೆಗಳನ್ನು ಸಹ ಎದುರಿಸುತ್ತಿದ್ದಾರೆ.

ಟ್ರೋಲಿಗರ ಬಾಯಿಗೆ ಆಹಾರವಾದರೂ ಉರ್ಫಿ ಆತ್ಮವಿಶ್ವಾಸ ಮಾತ್ರ ಕಳೆದುಕೊಂಡಿಲ್ಲ. ವಿಶಿಷ್ಟವಾದ ಉಡುಪಿನೊಂದಿಗೆ ಸಾರ್ವಜನಿಕರ ಮುಂದೆ ಬರಲು ಧೈರ್ಯಮಾಡುತ್ತಾಳೆ. ಅಂದಹಾಗೆ ಉರ್ಫಿ ಇಂತಹ ಬಟ್ಟೆಗಳನ್ನು ಏಕೆ ಧರಿಸುತ್ತಾರೆ ಎಂಬ ಬಗ್ಗೆ ಈಗ ಮುಕ್ತವಾಗಿ ಮಾತನಾಡಿದ್ದಾರೆ.

ಬಿಗ್ ಬಾಸ್ ಒಟಿಟಿಯಿಂದ ಉರ್ಫಿ ಜಾವೇದ್ ಜನಪ್ರಿಯತೆ ಗಳಿಸಿದರು. ಹೌಸ್ ಅರೆಸ್ಟ್ ಗೇಮ್ ರಿಯಾಲಿಟಿ ಶೋನ ಮೊದಲ ಸೀಸನ್ ನಲ್ಲಿಯೂ ಅವರು ಭಾಗವಹಿಸಿದ್ದರು. ಈ ಹಿಂದೆ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಉರ್ಫಿ, ಬಿಗ್ ಬಾಸ್ ಒಟಿಟಿ ಸೀಸನ್ 1 ರಲ್ಲಿ ಟಾಸ್ಕ್ ಗೆಲ್ಲಲು ಕಸದ ಚೀಲಗಳಿಂದ ಮಾಡಿದ ಉಡುಪನ್ನು ಧರಿಸಿ ಖ್ಯಾತಿ ಗಳಿಸಿದರು. ತಮ್ಮ ಸೃಜನಶೀಲತೆಗೆ ಮೆಚ್ಚುಗೆ ಪಡೆದರು. ಅಂದಿನಿಂದ ಉರ್ಫಿ ಸಾಮಾನ್ಯ ಉಡುಗೆಯನ್ನು ಧರಿಸಲೇ ಇಲ್ಲ.

ರಿಯಾಲಿಟಿ ಶೋ ನಂತರ ತಮ್ಮ ವಿಶಿಷ್ಟವಾದ ಫ್ಯಾಷನ್ ಆಯ್ಕೆಗಳಿಗಾಗಿ ಜನರಿಗೆ ಹತ್ತಿರವಾದ ಉರ್ಫಿ ಇನ್ಸ್ಟಾಗ್ರಾಂನಲ್ಲಿ 4.2 ಅನುಯಾಯಿಗಳನ್ನು ಸಂಪಾದಿಸುವ ಮೂಲಕ ಆನಂದಿಂದ ತೇಲುತ್ತಿದ್ದಾರೆ.

ಇತ್ತೀಚೆಗೆ ಉರ್ಫಿ ಜಾವೇದ್ ಸಂದರ್ಶನವೊಂದರಲ್ಲಿ ನಿರಂತರವಾಗಿ ಟ್ರೋಲ್ ಆಗುತ್ತಿರುವ ಬಗ್ಗೆಯೂ ಮಾತನಾಡಿದ್ದಾರೆ. ಜೊತೆಗೆ ಅವರ ಬೋಲ್ಡ್ ಡ್ರೆಸ್ಸಿಂಗ್ ಹಿಂದಿನ ನಿಜವಾದ ಕಾರಣವನ್ನೂ ಬಹಿರಂಗಪಡಿಸಿದ್ದಾರೆ. ಸಂದರ್ಶನದಲ್ಲಿ, ಜನಪ್ರಿಯತೆ, ಖ್ಯಾತಿ ಅಥವಾ ಕೆಲಸದ ಬಗ್ಗೆ ಪ್ರಶ್ನಿಸಿದಾಗ, ಉರ್ಫಿ, "ಕೆಲವು ಜನರು ನನ್ನನ್ನು ಗೌರವಿಸುವುದಿಲ್ಲ. ನನ್ನೊಂದಿಗೆ ಕೆಲಸ ಮಾಡಲು ಯಾರೂ ಬಯಸುವುದಿಲ್ಲ. ನಾನು ಎಲ್ಲರ ಗಮನಸೆಳೆಯುವ ಸಲುವಾಗಿಯೇ ಈ ರೀತಿಯ ಬಟ್ಟೆಗಳನ್ನು ಧರಿಸುವುದು'' ಎಂದು ಉರ್ಫಿ ಒಪ್ಪಿಕೊಂಡಿದ್ದಾರೆ. ಆದರೆ ಉರ್ಫಿ ಕುರಿತು ಕಾಮೆಂಟ್ ಮಾಡಿದರೆ ಆಕೆ ಖಂಡಿತವಾಗಿಯೂ ಕೋಪಗೊಳ್ಳುತ್ತಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net