ಸಂಭ್ರಮದ ಸೀಗೆ ಹುಣ್ಣಿಮೆ ಆಚರಣೆ

7-RNR-03
Published on

ರಾಣೆಬೆನ್ನೂರ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸೀಗೆ ಹುಣ್ಣಿಮೆ ಸಂಭ್ರಮದಿಂದ ಆಚರಿಸಲಾಯಿತು.

ಹುಣ್ಣಿಮೆ ಅಂಗವಾಗಿ ರೈತ ಕುಟುಂಬದವರು ಜಮೀನು, ಗದ್ದೆಗಳಿಗೆ ಭೂ ತಾಯಿ, ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಪಂಚ ಪಾಂಡವರನ್ನು ಪ್ರತಿಷ್ಠಾಪಿಸಿ ಹೋಳಿಗೆ, ಕರಿಗಡಬು, ವಿವಿಧ ಪಲ್ಲೆಗಳು, ಉಂಡಗಡಬು ಇನ್ನಿತರ ಭೋಜನ ದೇವರಿಗೆ ಸರ್ಮಪಿಸಿದರು.

ಈ ಬಾರಿ ಉತ್ತಮ ಮಳೆಯಾಗಿ ಫಸಲು ಚೆನ್ನಾಗಿರುವುದರಿಂದ ಭೂಮಿ ತಾಯಿಗೆ ಸೀಮಂತ ಕಾರ್ಯದ ಸಂಪ್ರದಾಯಕವಾಗಿ ಆಚರಿಸುವ ಸೀಗೆ ಹುಣ್ಣಿಮೆ ಕಳೆಗಟ್ಟಿತ್ತು. ರೈತರು ಚಕ್ಕಡಿ, ಟ್ರಾ$್ಯಕ್ಟರ್​ಗಳಲ್ಲಿ ಹೊಲಕ್ಕೆ ತೆರಳಿ ಭೂಮಿಗೆ ಚರಗ ಚೆಲ್ಲಿದರು. ಬಳಿಕ ಕುಟುಂಬ ಸದಸ್ಯರೊಂದಿಗೆ ಸಹಭೋಜನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net