ಹೆಂಡತಿ ಬಗ್ಗೆ ಬೇಸತ್ತ ಗಂಡ ಮಾಡಿದ್ದೇನು..?; ಯಾರಿಗಾದರೂ ಹೊಳೆದಿತ್ತೇ ಈ ಉಪಾಯ!

TRACK
Published on

ಮೌ (ಉತ್ತರಪ್ರದೇಶ):  ಮದುವೆ ಆದ ಮೇಲೆ, ಹೆಂಡತಿ ಮೇಲೆ ಬೇಜಾರಾದ್ರೆ ಏನು ಮಾಡಬೇಕು..?

ಯಾರು ಯಾರ ತಲೆಯಲ್ಲಿ ಏನು ಯೋಚನೆಗಳು ಬರುತ್ತವೋ ಗೊತ್ತಿಲ್ಲ. ಆದರೆ ಈ ಪುಣ್ಯಾತ್ಮನ ತಲೆಯಲ್ಲಿ ಬಂದದ್ದು ಮಾತ್ರ ಇದು.

ಈತ ಉತ್ತರ ಪ್ರದೇಶದ ಮೌ ಜಿಲ್ಲೆಯ ನಿವಾಸಿ, ವಿವಾಹಿತ. ಅಷ್ಟೇ ಅಲ್ಲ, ಪ್ರೇಮ ವಿವಾಹ ಕೂಡ! ಇವನಿಗೆ ತನ್ನ ಹೆಂಡತಿ ಮೇಲೆ ಇನ್ನಿಲ್ಲದ ಕೋಪ ಬಂದಿದೆ.

ತನ್ನ ಹೆಂಡತಿ ತವರಿಗೆ ಹೋಗಿಲ್ಲ ಎಂದು ಹೀಗೆ ಮಾಡಿದ್ದಾನೆ. ಹೆಂಡತಿ ಮೇಲೆ ಕೋಪ ಬಂದಿದ್ದೇ ತಡ ರೈಲು ಹಳಿಯನ್ನು ಎರಡು ಇಂಚು ಕೊಯ್ದು ಬಿಟ್ಟ!

ಅಷ್ಟೇ ಅಲ್ಲ, ಒಂದು ಬೆದರಿಕೆ ಪತ್ರವನ್ನು ಬರೆದ. ಅದರಲ್ಲಿ ಒಂದು ಪ್ರಮುಖ ಬೇಡಿಕೆ ಎಂದರೆ ತನ್ನ ಹೆಂಡತಿ ಮನೆಯವರು 50 ಕೊಟಿ ರೂಪಾಯಿ ಕೊಡಬೇಕು. ಜತೆಗೆ ತನ್ನ ಹೆಂಡತಿ ತವರಿಗೆ ಹೊರಟು ಹೋಗಬೇಕು.

ಇಂತಹ (ಅಧಿಕ) ಪ್ರಸಂಗ ಮೌ ಜಿಲ್ಲೆಯ ರತ್ನಪುರ ರೈಲು ನಿಲ್ದಾಣದ ಬಳಿ ನಡೆದಿದೆ. ಜತೆಗೆ ಪತ್ರದಲ್ಲಿ ಆ ವಿವಾಹಿತ ನನ್ನ ಈ ಬೇಡಿಕೆಗಳು ಎರಡು ದಿನದಲ್ಲಿ ಪೂರೈಸಬೇಕು. ಇಲ್ಲವಾದರೆ ಇದಕ್ಕಿಂತ ದೊಡ್ಡ ಅವಘಡಕ್ಕೆ ಕಾರಣವಾಗುತ್ತದೆ ಎಂದು ಬೇರೆ ಬೆದರಿಸಿದ್ದಾನೆ.

ಪೊಲೀಸ್​ ಸೂಪರ್​ ಇನ್​ಟೆಂಡ್​ಡೆಂಟ್​ ಅನುರಾಗ್​ ಆರ್ಯ ಮತ್ತು ಅವರ ತಂಡ ಇಡೀ ಪ್ರಕರಣವನ್ನು ತನಿಖೆ ನಡೆಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net