ಪ್ರಾಧ್ಯಾಪಕರಾಗಲು ಆಸಕ್ತಿ ಇದೆಯೆ? ಯುಪಿಎಸ್​ಸಿ ಅವಕಾಶ ಕಲ್ಪಿಸಿದೆ

UPSC
Published on

ನವದೆಹಲಿ: ಸಹಾಯಕ ಪ್ರಾಧ್ಯಾಪಕರು ಮತ್ತು ಇತರ 121 ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಮೆಡಿಕಲ್ ಆಫೀಸರ್/ ರಿಸರ್ಚ್ ಆಫೀಸರ್-36, ಅಸಿಸ್ಟೆಂಟ್ ಇಂಜಿನಿಯರ್-3, ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್-60, ಸೀನಿಯರ್ ಸೈಂಟಿಫಿಕ್ ಆಫೀಸರ್-21, ಆರ್ಕಿಟೆಕ್ಟ್ ಗ್ರೂಪ್ ಎ-1 ಹುದ್ದೆಗಳಿವೆ.

ಅರ್ಹ ಅಭ್ಯರ್ಥಿಗಳು ಯುಪಿಎಸ್ಸಿಯ ಅಧಿಕೃತ ಸೈಟ್ ಮೂಲಕ upsc.gov.in ನಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 13. ಸಂಪೂರ್ಣ ಸಲ್ಲಿಸಿದ ಆನ್‌ಲೈನ್ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ ಆಗಸ್ಟ್ 14 ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net