

ನವದೆಹಲಿ: ನಾಗರಿಕ ಸೇವೆಗಳ ಮೇನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ವ್ಯಕ್ತಿತ್ವ ಪರೀಕ್ಷೆಗಾಗಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಸಂದರ್ಶನ ದಿನಾಂಕ ನಿಗದಿಪಡಿಸಿದೆ.
ಈ ಸಂದರ್ಶನವು ಫೆಬ್ರವರಿ 17ರಿಂದ ಏಪ್ರಿಲ್ 3ರ ವರೆಗೆ ನಡೆಯಲಿದೆ. ಒಟ್ಟು 2,304 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಐಎಎಸ್, ಐಪಿಎಸ್ ಸೇರಿ ವಿವಿಧ ಸೇವೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅಂಕ ವಿವರ ಬಿಡುಗಡೆ: ಭಾರತೀಯ ಆರ್ಥಿಕ ಸೇವೆ, ಭಾರತೀಯ ಸಂಖ್ಯಾಶಾಸ್ತ್ರ ಸೇವೆ, ಜಿಯೋ ಸೈಂಟಿಸ್ಟ್ ಹಾಗೂ ಜಿಯೋಲಾಜಿಸ್ಟ್ ಹುದ್ದೆಗಳಿಗೆ ಆಯ್ಕೆಯಾದವರ ಅಂತಿಮ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿ ಮತ್ತು ಸಂದರ್ಶನಕ್ಕೆ ಸಂಬಂಧಿಸಿದ ಇತರೆ ಮಾಹಿತಿಗಳಿಗೆ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ನ ಜಾಲತಾಣ https://www.upsc.gov.in/ ಗೆ ಭೇಟಿ ನೀಡಬಹುದು. ಅದೇ ರೀತಿ, ಅಭ್ಯರ್ಥಿಗಳು ಅಂಕಗಳ ವಿವರವನ್ನೂ ತಿಳಿಯಬಹುದು. (ಏಜೆನ್ಸೀಸ್)