UPI: ದೇಶದಲ್ಲಿ ಹೆಚ್ಚಾಯ್ತು ಯುಪಿಐ ಟ್ರೆಂಡ್ ..ಆರು ತಿಂಗಳಲ್ಲಿ ಶೇ 52ರಷ್ಟು ಹೆಚ್ಚಾದ ವಹಿವಾಟು!

UPI
Published on

ನವದೆಹಲಿ: ಏಕೀಕೃತ ಪಾವತಿ ಇಂಟರ್ಫೇಸ್ (UPI) ಟ್ರೆಂಡ್ ದೇಶದಲ್ಲಿ ವೇಗವಾಗಿ ಹೆಚ್ಚುತ್ತಿದೆ. ದೇಶದ ಮೂಲೆ ಮೂಲೆಯಲ್ಲಿರುವ ಜನರು ಸಣ್ಣ ಮತ್ತು ದೊಡ್ಡ ವಹಿವಾಟುಗಳಿಗಾಗಿ ಯುಪಿಐ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. 2024 ರ ಜನವರಿ-ಜೂನ್ ಅವಧಿಯಲ್ಲಿ 78.97 ಬಿಲಿಯನ್ ವಹಿವಾಟು ಯುಪಿಐ ಮೂಲಕ ನಡೆದಿವೆ.

ಪಾವತಿ ತಂತ್ರಜ್ಞಾನ ಸೇವಾ ಪೂರೈಕೆದಾರ ವರ್ಲ್ಡ್‌ಲೈನ್ ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜನವರಿ-ಜೂನ್ 2024 ರ ಅವಧಿಯಲ್ಲಿ ಯುಪಿಐ ಮೂಲಕ 78.97 ಬಿಲಿಯನ್ ವಹಿವಾಟುಗಳು ನಡೆದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ 52ರಷ್ಟು ಹೆಚ್ಚಾಗಿದೆ.

ಪಾವತಿ ಮಾರುಕಟ್ಟೆಯಲ್ಲಿ ಯುಪಿಐ ಪ್ರಾಬಲ್ಯ ಮುಂದುವರೆಸಿದೆ ಮತ್ತು ವೇಗವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಎಂದು ವರದಿ ಹೇಳುತ್ತದೆ.

ಮೊದಲಾರ್ಧದಲ್ಲಿ ಯುಪಿಐ ವಹಿವಾಟುಗಳ ಮೌಲ್ಯದಲ್ಲಿ 40 ಪ್ರತಿಶತದಷ್ಟು ಹೆಚ್ಚಳವಾಗಿದೆ. 2024 ರ ಜನವರಿ-ಜೂನ್ ಅವಧಿಯಲ್ಲಿ 116.63 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆದಿದ್ದು, 2023 ರ ಇದೇ ಅವಧಿಯಲ್ಲಿ ಇದರ ಮೌಲ್ಯ 83.16 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net