'ಬುದ್ಧಿವಂತ'ನ ಕಲ್ಟ್​ ಸಿನಿಮಾ ಮತ್ತೆ ಪ್ರೇಕ್ಷಕರ ಎದುರು! 1999ರಲ್ಲಿ ತೆರೆಕಂಡ ಉಪ್ಪಿ ನಿರ್ದೇಶನದ ಚಿತ್ರ ರೀ-ರಿಲೀಸ್​ಗೆ ಸಜ್ಜು​ | Upendra

ವಿಜಯವಾಣಿ (11)
Published on

Upendra Re-Release: ಕನ್ನಡ ಚಿತ್ರರಂಗದ ‘ಬುದ್ಧಿವಂತ’ ನಿರ್ದೇಶಕ, ರಿಯಲ್​ ಸ್ಟಾರ್​, ನಟ ಉಪೇಂದ್ರ ಇದೀಗ ವರ್ಷಗಳ ಬಳಿಕ ಮತ್ತೊಮ್ಮೆ ‘ಯುಐ’ ಚಿತ್ರದ ಮುಖೇನ ಡೈರೆಕ್ಟರ್​ ಕ್ಯಾಪ್​ ತೊಟ್ಟಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ. ನೆಚ್ಚಿನ ಅಭಿಮಾನಿಗಳನ್ನು ಮನರಂಜಿಸಲು ವಿಶೇಷ ಹಾಗೂ ವಿಭಿನ್ನತೆಯಿಂದ ಪ್ರೇಕ್ಷಕರ ಎದುರಿಗೆ ಹಾಜರಾಗುವ ಉಪ್ಪಿ ಅಭಿನಯದ 1999ರಲ್ಲಿ ತೆರೆಕಂಡ ಕಲ್ಟ್​ ಸಿನಿಮಾ ಉಪೇಂದ್ರ ಇದೀಗ ಇನ್ನೊಮ್ಮೆ ತೆರೆ ಮೇಲೆ ರಾರಾಜಿಸಲಿದೆ.

ಇಂದು ಉಪೇಂದ್ರ ಅವರಿಗೆ ದೇಶ, ವಿದೇಶಗಳಲ್ಲಿಯೂ ಅಪಾರ ಸಂಖ್ಯೆ ಅಭಿಮಾನಿಗಳು ಹುಟ್ಟಿಕೊಳ್ಳಲು ಈ ಕಲ್ಟ್​ ಚಿತ್ರವೇ ಮೂಲ ಕಾರಣ ಎಂದರೆ ಖಂಡಿತ ತಪ್ಪಾಗಲಾರದು. ಸದಾ ವಿಭಿನ್ನತೆಯ ಅಭಿರುಚಿಯಿಂದಲೇ ಚಿತ್ರವನ್ನು ಮಾಡುವ ಉಪ್ಪಿ, ಅಂದು ಇದೊಂದು ಸಿನಿಮಾ ಮೂಲಕ ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದರು. ಇದೀಗ ಈ ಸೂಪರ್​ಹಿಟ್​ ಚಿತ್ರವು ತೆಲುಗಿನಲ್ಲಿ ರೀ-ರಿಲೀಸ್​ಗೆ ಸಜ್ಜಾಗಿದ್ದು, ಇದೇ ಅ.11ರಂದು ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ನಾಯಕನಾಗಿ ಉಪೇಂದ್ರ ಅಭಿನಯಿಸಿದ್ದರೆ, ನಾಯಕಿಯರಾಗಿ ರವೀನಾ ಟಂಡನ್, ಪ್ರೇಮಾ ಮತ್ತು ದಾಮಿನಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಉಪೇಂದ್ರ ಅವರೇ ಬರೆದು ನಿರ್ದೇಶಿಸಿದ್ದು, ಅಂದಿನ ಮಟ್ಟಕ್ಕೆ ಕನ್ನಡದಲ್ಲಿ ಭರ್ಜರಿ ಯಶಸ್ಸನ್ನು ಕಂಡಿತು. ಸದ್ಯ ಇದೇ ಟೈಟಲ್​ನಲ್ಲಿ ಇದೀಗ ತೆಲುಗಿನಲ್ಲಿಯೂ ತೆರೆ ಕಾಣುತ್ತಿರುವ 'ಉಪೇಂದ್ರ' ಚಿತ್ರವನ್ನು ಹೆಸರಾಂತ ಮೈತ್ರಿ ಮೂವಿ ಡಿಸ್ಟ್ರಿಬ್ಯೂಟರ್ಸ್ ರಿಲೀಸ್​ ಮಾಡುತ್ತಿದೆ. ಇಂದು ಟ್ರೇಲರ್ ಬಿಡುಗಡೆಗೊಳಿಸಿದ್ದು, ತಮ್ಮ ಜಾಲತಾಣದ ಖಾತೆಯಲ್ಲಿ ಚಿತ್ರದ ರಿಲೀಸ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net