

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಯುಐ ಚಿತ್ರವು ಬಿಡಿಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿದ್ದು, ಚಿತ್ರದ ಬಗೆಗಿನ ನಿರೀಕ್ಷೆ ದುಪ್ಪಟ್ಟಾಗಿದೆ. ಇದೀಗ ಚಿತ್ರಕ್ಕೆ ಸಂಬಂಧಿಸಿದ ಮೇಜರ್ ಅಪ್ಡೇಟ್ ಒಂದು ಹೊರಬಿದ್ದಿದ್ದು, ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ದುಪ್ಪಟ್ಟುಗೊಳಿಸಿದೆ.
ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ ಸೌಂಡ್ ಆಫ್ ಯುಐ ಇಂದು (ಆಗಸ್ಟ್ 23) ಬಿಡುಗಡೆಯಾಗಿದ್ದು, ಮೊದಲ ಬಾರಿಗೆ ಕನ್ನಡದ ಚಿತ್ರರಂಗದಿಂದ ಇಂಥದ್ದೊಂದು ದಾಖಲೆಗೆ ಮುನ್ನುಡಿ ಬರೆದಿದೆ. ಯುಐ ಚಿತ್ರತಂಡ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಯುಐ ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳು ನಡೆದಿರುವ ಕಾರಣ ಅದನ್ನು ತೋರಿಸಲು ಈಗ ಚಿತ್ರತಂಡ ಮುಂದಾಗಿದೆ. ಜೊತೆಗೆ ಹಿತಕರ ಬಿಜಿಎಂ ಸೌಂಡ್‌ನ ಝಲಕ್ ಈಗ ರಿಲೀಸ್ ಮಾಡಲಾಗಿದೆ.
ಭಾರತದಲ್ಲಿ ಹಲವು ಪ್ರಕಾರದ ಸಂಗೀತ ವಾದ್ಯಗಳನ್ನ ಉಪಯೋಗಿಸಲಾಗುತ್ತದೆ ಸ್ಪೆಷಲ್ ಇನ್‌ಸ್ಟ್ರುಮೆಂಟ್ಸ್ ಅವಶ್ಯವಿದ್ದಲ್ಲಿ ತರಿಸಿ ಇಲ್ಲಿಯೇ ಸಂಯೋಜಿಸಲಾಗತ್ತೆ. ಆದರೆ ಯುಐ ತಂಡ ಇನ್ನೋಂದು ಹೆಜ್ಜೆ ಮುಂದೆ ಹೋಗಿ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಹಲವು ದಿನಗಳು ಇದ್ದು ಸಂಗೀತ ಸಂಯೋಜನೆ ಮಾಡಿಕೊಂಡು ಬಂದಿದೆ. ಇಲ್ಲಿ ‘ಯುಐ’ ಬಿಜಿಎಂ ಹಾಗೂ ಕೆಲವು ಹಾಡುಗಳನ್ನೂ ರೆಕಾರ್ಡಿಂಗ್ ಮಾಡಿಕೊಳ್ಳಲಾಗಿದೆ. ನೂರಾರು ವಾದ್ಯಗಳನ್ನು ಬಳಸಿ ಒಮ್ಮೆಲೇ ಸಂಗೀತ ನುಡಿಸಲಾಗಿದೆ. ಇದರ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಉಪ್ಪಿ-2 ನಂತರ ರಿಯಲ್ ಸ್ಟಾರ್ ಉಪೇಂದ್ರ ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು, ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್ಟೈನ್ಮೆಂಟ್ಸ್ ಚಿತ್ರಕ್ಕೆ ಜಂಟಿಯಾಗಿ ಬಂಡವಾಳ ಹೂಡಿದೆ. ಉಪೇಂದ್ರಗೆ ಜೋಡಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಮೊದಲ ಬಾರಿಗೆ ನಟಿಸಿದ್ದಾರೆ. ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಸದ್ಯ ಸಿನಿಮಾ ಸೌಂಡ್ ಆಫ್ ಯುಐನಿಂದ ಸದ್ದು ಮಾಡುತ್ತಿದೆ.