ಪಾಠ ಮಾಡುವುದು ಬಿಟ್ಟು ಮೊಬೈಲ್​ನಲ್ಲಿ ಕ್ಯಾಂಡಿಕ್ರಷ್ ಆಡ್ತಿದ್ದ ಶಾಲಾ ಶಿಕ್ಷಕ ಅಮಾನತು

teacher
Published on

ಉತ್ತರ ಪ್ರದೇಶ: ಶಾಲಾ ಸಮಯದಲ್ಲಿ ಮಕ್ಕಳಿಗೆ ಪಾಠ ಮಾಡುವುದು ಬಿಟ್ಟು ಮೊಬೈಲ್​ ಹಿಡಿದು ಕ್ಯಾಂಡಿಕ್ರಷ್​ ಆಟವಾಡುತ್ತಿದ್ದ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಕರ್ತವ್ಯದ ಸಮಯದಲ್ಲಿ ಮೊಬೈಲ್​ನಲ್ಲಿ ಆಟವಾಡುತ್ತಾ ಇದ್ದಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ಅಮಾನತು ಗೊಂಡಿರುವ ಶಿಕ್ಷಕನನ್ನು ಪ್ರಿಯಂ ಗೋಯಲ್ ಗುರುತಿಸಲಾಗಿದೆ. ಈ ಶಿಕ್ಷಕ ತನ್ನ ಕರ್ತವ್ಯ ಸಮಯದಲ್ಲಿ ಮಕ್ಕಳಿಗೆ ಪಾಠ ಮಾಡುವುದು ಬಿಟ್ಟು ತರಗತಿಯಲ್ಲಿ ಕುಳಿತುಕೊಂಡು ತನ್ನ ಮೊಬೈಲ್​ನಲ್ಲಿ ಗೇಮ್​ ಆಡುತ್ತಾ ಹೆಚ್ಚು ಸಮಯ ಮೊಬೈಲ್ ನಲ್ಲಿ ಕಳೆಯುತ್ತಾರೆ ಎಂದು ವಿದ್ಯಾರ್ಥಿಗಳು ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಕುರಿತು ಹಿರಿಯ ಅಧಿಕಾರಿಗಳಿಗೆ ದೂರು ಕೂಡ ನೀಡಲಾಗಿತ್ತು. ಅದರಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪನ್ಸಿಯಾ ಅವರು ಪರಿಶೀಲನೆಗಾಗಿ ಶಾಲೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಮಕ್ಕಳ ಪುಸ್ತಕ ತೆಗೆದು ನೋಡಿದಾಗ ಹೆಚ್ಚಿನ ತಪ್ಪುಗಳು ಎದ್ದು ಕಾಣಿಸಿದ್ದವು ಈ ಕುರಿತು ಮಕ್ಕಳನ್ನು ವಿಚಾರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಕರ್ತವ್ಯದ ಸಮಯದಲ್ಲಿ ಗಂಟೆಗಳ ಕಾಲ ಕ್ಯಾಂಡಿಕ್ರಷ್ ಆಡಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಶಾಲಾ ಸಮಯದಲ್ಲಿ ಕ್ಯಾಂಡಿ ಕ್ರಷ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕಳೆದರು ಎಂದು ಬಹಿರಂಗಪಡಿಸಿತು. ಶಾಲಾ ಸಮಯದಲ್ಲಿ ಮೊಬೈಲ್ ಫೋನ್​ಗಳನ್ನು ಬಳಸುವುದು ಸೂಕ್ತವಲ್ಲ, ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪನ್ಸಿಯಾ ಅವರು ಆರು ವಿದ್ಯಾರ್ಥಿಗಳ ಹೋಂವರ್ಕ್​ನಲ್ಲಿ ಆರು ಪುಟಗಳನ್ನು ಪರಿಶೀಲಿಸಿದರು ಮತ್ತು 95 ತಪ್ಪುಗಳನ್ನು ಗುರುತಿಸಿದರು.

ಒಂಬತ್ತು ಮೊದಲ ಪುಟದಲ್ಲಿಯೇ ಇತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಸಹಾಯಕ ಶಿಕ್ಷಕಿ ಪ್ರಿಯಾಂ ಗೋಯಲ್ ಅವರ ಫೋನ್ ಪರಿಶೀಲಿಸಿದರು. ಶಿಕ್ಷಕರ ಫೋನ್‌ನಲ್ಲಿ ಕ್ಯಾಂಡಿಕ್ರಷ್​ ಪ್ರತಿದಿನ ಸರಾಸರಿ ಒಂದೂವರೆ ಗಂಟೆಗಳಿಗಿಂತ ಹೆಚ್ಚು ಕಾಲ ಉಪಯೋಗಿಸುತ್ತಾರೆ ಎಂದು ತಿಳಿದು ಬಂದಿದೆ.

ಶಾಲೆಯ ಐದೂವರೆ ಗಂಟೆಗಳಲ್ಲಿ, ಪ್ರಿಯಮ್ ಗೋಯಲ್ ಕ್ಯಾಂಡಿ ಕ್ರಷ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕಳೆಯುತ್ತಾರೆ. 26 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡಿದರು ಮತ್ತು ಸುಮಾರು 30 ನಿಮಿಷಗಳ ಕಾಲ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಬಳಸಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ನಂತರ ರಾಜ್ಯ ಶಿಕ್ಷಣ ಇಲಾಖೆಗೆ ವಿಷಯದ ಬಗ್ಗೆ ತಿಳಿಸಿದ್ದು, ನಂತರ ಅವರು ಅದನ್ನು ಅರಿತುಕೊಂಡು ಸಹಾಯಕ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net