ದೀಪಾವಳಿ ವೇಳೆಗೆ ಉತ್ತರ ಪ್ರದೇಶದ ಎಲ್ಲ ರಸ್ತೆಗಳೂ ಗುಂಡಿ ಮುಕ್ತ; ಸರ್ಕಾರದಿಂದ 275 ರೂ. ಕೋಟಿ ಬಿಡುಗಡೆ

pp
Published on

ಉತ್ತರಪ್ರದೇಶ: ದೀಪಾವಳಿ ವೇಳೆಗೆ ಉತ್ತರಪ್ರದೇಶದ ರಸ್ತೆಗಳನ್ನು ಗುಂಡಿ ಮುಕ್ತ ಮಾಡಲು ಸರ್ಕಾರ ಪಣ ತೊಟ್ಟಿದೆ. ಹಬ್ಬ ಬರುವಷ್ಟರಲ್ಲಿ ರಸ್ತೆ ಸರಿಪಡಿಸುವುದಕ್ಕೆ ಮೀಸಲಿಟ್ಟ ಹಣದ ಮೊದಲ ಕಂತಾಗಿ 275 ಕೋಟಿ ರೂಪಾಯಿ ಈಗಾಗಲೇ ಬಿಡುಗಡೆ ಮಾಡಲಾಗಿದೆ.


ಈ ಬಗ್ಗೆ ಮಾತನಾಡಿದ ಉತ್ತರ ಪ್ರದೇಶದ ಲೋಕೋಪಯೋಗಿ ಅಭಿವೃದ್ಧಿ ರಾಜ್ಯ ಸಚಿವ ಬ್ರಿಜೇಶ್ ಸಿಂಗ್, ನವೆಂಬರ್ ಎರಡನೇ ವಾರದೊಳಗೆ ರಾಜ್ಯಾದ್ಯಂತ ರಸ್ತೆ ದುರಸ್ತಿಯಾಗಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪಷ್ಟ ನಿರ್ದೇಶನವನ್ನ ನೀಡಿದ್ದಾರೆ ಎಂದು ಹೇಳಿದರು.


ಇದರ ಮೊದಲ ಕಂತನ್ನ ಬಿಡುಗಡೆ ಮಾಡಲಾಗಿದ್ದು ಇದನ್ನ ಕೇವಲ ರಸ್ತೆ ದುರಸ್ತಿಗೆ ಬಳಸಿಕೊಳ್ಳಲಾಗುತ್ತದೆ. ಮಳೆಗಾಲದಲ್ಲಿ ರಸ್ತೆಗಳು ಹೇಗೆ ಹದಗೆಡುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಮಳೆಗಾಲದಲ್ಲಿ ಗುಂಡಿಗಳಿಲ್ಲದ ರಸ್ತೆ ಇರಲು ಸಾಧ್ಯವೇ ಇಲ್ಲ.


ಎಂಜಿನಿಯರ್‌ಗಳೊಂದಿಗೆ ಈಗಾಗಲೇ ಮೂರು ಸುತ್ತಿನ ಸಭೆ ನಡೆಸಲಾಗಿದ್ದು, ನಮ್ಮಿಂದ ಮೊದಲ ಕಂತಿನ 275 ಕೋಟಿ ಬಿಡುಗಡೆಯಾಗಿದೆ. ನಮಗೆ ಹಣದ ಕೊರತೆಯಿಲ್ಲ , ಅಗತ್ಯಬಿದ್ದಲ್ಲಿ ಮತ್ತಷ್ಟು ಹಣ ಬಿಡುಗಡೆ ಮಾಡುತ್ತೇವೆ ಬಜೆಟ್​​ಗೆ ಯಾವುದೇ ಕೊರತೆ ಇಲ್ಲ ಎಂದಿದ್ದಾರೆ.


ನಮ್ಮ ತಂಡದ ಕೆಲಸದಿಂದ ನಾವು ದೀಪವಾಳಿ ಹಬ್ಬದ ಮುನ್ನವೇ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳಿಸಲಿದ್ದೇವೆ ಎಂಬ ನಂಬಿಕೆ ನಮಗಿದೆ. ದೀಪಾವಳಿಯ ವೇಳೆಗೆ ಉತ್ತರ ಪ್ರದೇಶದ ರಸ್ತೆಗಳನ್ನು ಗುಂಡಿಗಳಿಂದ ಮುಕ್ತಗೊಳಿಸಲಾಗುವುದು ಎಂಬ ಮುಖ್ಯಮಂತ್ರಿಯವರ ನಿರೀಕ್ಷೆಯನ್ನು PWD ಇಲಾಖೆ ಪೂರೈಸುತ್ತದೆ ಎಂದು ಉತ್ತರ ಪ್ರದೇಶದ ಲೋಕೋಪಯೋಗಿ ಅಭಿವೃದ್ಧಿ ರಾಜ್ಯ ಸಚಿವ ಬ್ರಿಜೇಶ್ ಸಿಂಗ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net