

ಉತ್ತರಪ್ರದೇಶ: ಮನೆಯಲ್ಲಿ ಯಾರು ಮೊದಲು ಸ್ನಾನ ಮಾಡುತ್ತಾರೆ ಎನ್ನುವ ಜಗಳದಲ್ಲಿ ಯುವಕನೊಬ್ಬ ತನ್ನ ಸಹೋದರನನ್ನು ಹೊಡೆದು ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಫಕೀರ್ (35) ಮೃತ. ಗ್ಯಾಸ್ ವೆಲ್ಡಿಂಗ್ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ. ಫಕೀರ್‌ನ ಕಿರಿಯ ಸಹೋದರ ಶಾದಾಬ್ ಪೊಲೀಸ್ ಠಾಣೆಗೆ ಆಗಮಿಸಿ, ತನ್ನ ಸಹೋದರನನ್ನು ಕೊಂದು ನಂತರ ಬಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಫಕೀರ್ ತನ್ನ ಪತ್ನಿ ನಸೀಮ್ ಜಹಾನ್ ಮತ್ತು ಪುತ್ರಿಯರೊಂದಿಗೆ ಚಕ್ಕರ್ ಕಿ ಮಿಲಾಕ್‌ನ ಚರಂಡಿಯ ಬಳಿ ವಾಸಿಸುತ್ತಿದ್ದನು. ಈ ಮನೆಯಲ್ಲಿ ಫಕೀರನ ಐವರು ಸಹೋದರರೂ ವಾಸವಾಗಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಸಹೋದರರ ನಡುವೆ ಜಗಳ ನಡೆಯುತ್ತಿತ್ತು.
ಪೊಲೀಸರು ಸ್ಥಳಕ್ಕೆ ತಲುಪಿದಾಗ ಫಕೀರ್‌ನ ದೇಹವು ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಫಕೀರ್ ಅವರ ಹಿರಿಯ ಮಗಳು ಖೈರುಲ್ ನಿಶಾ ಶುಕ್ರವಾರ ಮಧ್ಯಾಹ್ನ ಸ್ನಾನಗೃಹದಲ್ಲಿ ಸ್ನಾನ ಮಾಡಲು ಹೋಗುತ್ತಿದ್ದರು. ಅಷ್ಟರಲ್ಲಿ ಅವಳ ಅತ್ತೆ ಬಂದರು. ಆಗ ಇಬ್ಬರ ನಡುವೆ ಜಗಳ ಪ್ರಾರಂಭವಾಯ್ತು. ಫಕೀರನೂ ಮಧ್ಯೆ ಬಂದು ಜಗಳವಾಡತೊಡಗಿದ. ಈ ವಿಚಾರವಾಗಿ ಫಕೀರ್ ತನ್ನ ಕಿರಿಯ ಸಹೋದರ ಶಾದಾಬ್ ಜತೆ ಜಗಳವಾಡಿದ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಾದಾಬ್ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಅಷ್ಟರಲ್ಲಿ ಶಾದಾಬ್ ಜತೆಗೆ ಅವನ ಇತರ ಸಹೋದರರೂ ಬಂದರು. ಎಲ್ಲರೂ ಫಕೀರನನ್ನು ಹೊಡೆದು ಸಾಯಿಸಿದರು. ನಂತರ ಆರೋಪಿ ಶಾದಾಬ್ ಠಾಣೆಗೆ ಬಂದು ಠಾಣೆಗೆ ತೆರಳಿ ಅಣ್ಣನನ್ನು ಕೊಂದು ಬಂದಿರುವುದಾಗಿ ತಿಳಿಸಿದ್ದಾನೆ.