

ಗೊಂಡಾ: ತವರುಮನೆಗೆ ಹೋದ ಪತ್ನಿ ವಾಪಸ್ ಬರಲು ಲಾಕ್ಡೌನ್ ಅಡ್ಡಿಯಾಯ್ತು. ಆದರೆ ಪತ್ನಿಯಿಲ್ಲದೆ ಮನನೊಂದ ಪತಿ ಜೀವವನ್ನೇ ಕಳೆದುಕೊಂಡಿದ್ದಾನೆ.
ಉತ್ತರಪ್ರದೇಶದ ಗೊಂಡಾದ ರಾಧಾ ಕುಂದ್ ಎಂಬಲ್ಲಿ ಈ ಘಟನೆ ನಡೆದಿದೆ. ರಾಕೇಶ್ ಸೋನಿ (32) ಮೃತ. ಈತ ಪತ್ನಿ ಲಾಕ್ಡೌನ್ಗೂ ಮೊದಲೇ ತನ್ನ ತವರು ಮನೆಗೆ ಹೋಗಿದ್ದರು. ಆದರೆ ಬಳಿಕ ಕರೊನಾ ವೈರಸ್ ಕಾರಣದಿಂದ ಏಕಾಏಕಿ ಲಾಕ್ಡೌನ್ ಆಗಿದ್ದರಿಂದ ಆಕೆಗೆ ವಾಪಸ್ ಬರಲು ಸಾಧ್ಯವಾಗದೆ ಅಲ್ಲಿಯೇ ಇದ್ದಳು. ಇದರಿಂದ ರಾಕೇಶ್ ಬೇಸರ ಮಾಡಿಕೊಂಡಿದ್ದ.
ಎಷ್ಟು ದಿನಗಳಾದರೂ ಪತ್ನಿ ವಾಪಸ್ ಬಾರದಾಗ ಹತಾಶೆಯಿಂದ ಮನನೊಂದು ರಾಕೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ಕೈಗೊಂಡಿದ್ದಾಗಿ ಹೇಳಿದ್ದಾರೆ. (ಏಜೆನ್ಸೀಸ್)