'ಹೌದು, ನಾನು ಕುಡಿದಿದ್ದೇನೆ': ಪಬ್​ನಿಂದ ಹೊರಬಂದ ನಟಿ ಆಡಿದ ಮಾತು ವೈರಲ್​..

urfi
Published on

ಮುಂಬೈ: ನಟಿ ಹಾಗೂ ‘ಬಿಗ್ ಬಾಸ್’ ಸ್ಪರ್ಧಿ ಉರ್ಫಿ ಜಾವೇದ್ ಶನಿವಾರ ರಾತ್ರಿ ಮುಂಬೈನ ಐಷಾರಾಮಿ ಪಬ್‌ನಿಂದ ಹೊರಬಂದಾಗ ಆಕೆಯ ಚಿತ್ರತೆಗೆಯಲು ಕೆಲವರು ಕಾಯುತ್ತಿದ್ದರು. ಆಗ ಆಕೆ ಹಿಂದೆ ಮುಂದೆ ನೋಡದೆ ಬೋಲ್ಡ್​ ಆಗಿ 'ಹೌದು, ನಾನು ಕುಡಿದಿದ್ದೇನೆ' ಎಂದು ಒಪ್ಪಿಕೊಳ್ಳಲು ಹಿಂಜರಿಯಲಿಲ್ಲ.

ಉರ್ಫಿ ಜಾವೇದ್​ ಈ ಮಾತನ್ನು ಸೀರಿಯಸ್​ ಆಗಿ ಏನೂ ಹೇಳಲಿಲ್ಲ. ಮತ್ತಿನ ಗಮ್ಮತ್ತಿನಲ್ಲಿ ಮಾದಕವಾಗಿ ಹೇಳುವಂತೆ ಕುಡಿದಿದ್ದೇನೆ. ಸಾಕು ಇನ್ನು ಫೋಟೋ ತೆಗೆಯುವುದು, ವೀಡಿಯೋ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದಳು. ಒಂದು ಸುತ್ತು ತಿರುಗಿ ಜೇಬಲ್ಲಿ ಎರಡೂ ಕೈಗಳನ್ನು ಇಟ್ಟುಕೊಂಡು ಮೈಮಾಟವನ್ನೂ ಪ್ರದರ್ಶಿಸಿದಳು.

ನಟಿಯ ವೀಡಿಯೊ ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಆಕೆ ಐಷಾರಾಮಿ ಪಬ್‌ನಿಂದ ನಿರ್ಗಮಿಸುತ್ತಿರುವುದನ್ನು ಕಾಣಬಹುದು. ಉರ್ಫಿ ಕಪ್ಪು ಬಣ್ಣದ ಬ್ಯಾಕ್‌ಲೆಸ್ ಜಂಪ್‌ಸೂಟ್‌ ಮತ್ತು ದಪ್ಪನೆಯ ನೆಕ್ಲೇಸ್‌ನೊಂದಿಗೆ ಆಕರ್ಷಕವಾಗಿ ಕಾಣುತ್ತಿದ್ದಳು.

ಉರ್ಫಿ ರೆಸ್ಟಾರೆಂಟ್‌ನಿಂದ ಹೊರಬಂದ ತಕ್ಷಣ, ಫೋಟಫ ಮತ್ತು ವೀಡಿಯೋಗಳಿಗಾಗಿ ಆಕೆಯನ್ನು ಕೆಲವರು ಸುತ್ತುವರೆದರು. ಆಗ ಈ ಮಾದಕ ಚೆಲುವೆ, ತನ್ನನ್ನು ಹೋಗಲು ಬಿಡುವಂತೆ ವಿನಂತಿಸಿದಳು. "ದಾರು ಪಿ ರಾಖೀ ಹೈ," ಎಂದು ಒಬ್ಬ ಫೋಟೋಗ್ರಾಫರ್‌ ಕಿವಿಯೊಳಗೆ ಪಿಸುಗುಟ್ಟಿದಳು. ನಂತರ, ಆಕೆ "ಬಹುತ್ ಪಿ ರಾಖಿ ಹೈ ಯಾರ್, ಜಾನೆ ದೋ" ಎಂದು ಹೇಳಿದಳು.

ವೀಡಿಯೊ ವೈರಲ್ ಆಗುತ್ತಿದ್ದಂತೆ, ನೆಟಿಜನ್‌ಗಳು ಆಕೆಯ ಪ್ರಾಮಾಣಿಕ ಸ್ವಭಾವಕ್ಕಾಗಿ ಶ್ಲಾಘಿಸಿದ್ದಾರೆ. "ಅವಳು ಎಷ್ಟೋಂದು ನಿಷ್ಪಕ್ಷಪಾತಿ..ಹೀಗಾಗಿಯೇ ನನಗಿಷ್ಟ" ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾನೆ. ಇನ್ನೊಬ್ಬರು "ಇಟ್ನಾ ಬೋಲ್ನೆ ಕೆ ಲಿಯೆ ಭಿ ಹಿಮ್ಮತ್ ಚಾಹಿಯೆ" ಎಂದು ಬರೆದಿದ್ದಾರೆ.

ಅಷ್ಟೇ ಅಲ್ಲ, ಭಾನುವಾರ ಬೆಳಿಗ್ಗೆ,ಉರ್ಫಿ ತನ್ನ ನೋ-ಫಿಲ್ಟರ್ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾಳೆ. ಹಿಂದಿನ ರಾತ್ರಿ ಕುಡಿದಿದ್ದರೂ ತನ್ನ ಮೇಕ್ಅಪ್ ಅನ್ನು ತೊಳೆಯಲು ಹೇಗೆ ಮರೆಯಲಿಲ್ಲ ಎಂಬುದನ್ನು ಪ್ರಸ್ತಾಪಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net