ಉಪಯೋಗಕ್ಕೆ ಬಾರದ ಬಸ್ ಶೆಲ್ಟರ್

anp bus shelter
ಮಾಸ್ತಿಕಲ್ಲು ಗ್ರಾಮದ ಬಸ್ ಶೆಲ್ಟರ್‌ನ ದುರವಸ್ಥೆ.
Published on

ಆನಂದಪುರ: ಶಿಕಾರಿಪುರಕ್ಕೆ ತೆರಳುವ ಮಾರ್ಗದ ಮಾಸ್ತಿಕಲ್ಲು ಗ್ರಾಮದ ಬಸ್ ಶೆಲ್ಟರ್ ಇದ್ದೂ ಇಲ್ಲದಂತಾಗಿದೆ. ಅಂಕುಡೊಂಕುಗಳನ್ನು ನಿವಾರಿಸಿಕೊಂಡು ಹೆದ್ದಾರಿ ನಿರ್ಮಿಸಲಾಗಿತ್ತು. ಈ ಸ್ಥಳದಲ್ಲಿ ತಗ್ಗಿನಿಂದ ಕೂಡಿತ್ತು. ಮಣ್ಣು ಹಾಕಿ ಹೆದ್ದಾರಿ ಎತ್ತರಿಸಿ ಸಮತಟ್ಟುಗೊಳಿಸಲಾಗಿದೆ.

ಈ ತಿರುವಿನಲ್ಲಿ ಲೋಕಸಭಾ ಸದಸ್ಯರ ಅನುದಾನದಲ್ಲಿ 6 ವರ್ಷಗಳ ಹಿಂದೆ ಬಸ್ ಶೆಲ್ಟರ್ ನಿರ್ಮಿಸಲಾಗಿತ್ತು. ಹೆದ್ದಾರಿಯ ಮಟ್ಟಕ್ಕಿಂತ ತಗ್ಗಿನಲ್ಲಿ ಬಸ್ ಶೆಲ್ಟರ್ ಇದೆ. ತಂಗುದಾಣದಲ್ಲಿ ಕುಳಿತುಕೊಂಡರೆ ಬಸ್ ಬರುವ ದೃಶ್ಯ ಪ್ರಯಾಣಿಕರಿಗೆ ಕಾಣದಂತಾಗಿದೆ. ಹಾಗಾಗಿ ಪ್ರಯಾಣಿಕರು ತಂಗುದಾಣದ ಬದಲು ಹೆದ್ದಾರಿ ಪಕ್ಕದಲ್ಲೇ ನಿಂತುಕೊಳ್ಳುವ ಅನಿವಾರ್ಯತೆ ಉಂಟಾಗಿದೆ.

ತಂಗುದಾಣದ ಸುತ್ತಮುತ್ತ ಆಳೆತ್ತರದ ಗಿಡಗಂಟಿ, ಪೊದೆಗಳು ಬೆಳೆದಿವೆ. 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶೆಲ್ಟರ್ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಖೈರಾ, ಮಲಂದೂರು, ತಿಪ್ಪನಜಡ್ಡು ಗ್ರಾಮದ ಜನರು ಈ ಸ್ಥಳದಲ್ಲಿ ಬಸ್‌ಗಾಗಿ ಕಾಯುತ್ತಾರೆ. ವೃದ್ಧರು, ರೋಗಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆದ್ದಾರಿ ಪಕ್ಕದಲ್ಲಿ ಮಳೆ ಮತ್ತು ಬಿಸಿಲಿನ ತಾಪ ಅನಿವಾರ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net