ಅವೈಜ್ಞಾನಿಕ ಕಾಂಕ್ರೀಟ್​ ರಸ್ತೆ; ವಾಹನ ಸವಾರರಿಗೆ ನಿತ್ಯ ಕಿರಿಕಿರಿ

27-RNR-08
Published on

ಹಾವೇರಿ: ತಾಲೂಕಿನ ತೋಟದಯಲ್ಲಾಪೂರ ಹಾಗೂ ಕಳ್ಳಿಹಾಳ ಗ್ರಾಮದ ಮಧ್ಯೆ ಇರುವ ರೈಲ್ವೆ ಕೆಳಸೇತುವೆ ಬಳಿ ಅವೈಜ್ಞಾನಿಕ ಕಾಂಕ್ರೀಟ್​ ರಸ್ತೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಕಬ್ಬಿಣದ ರಾಡ್​ಗಳು ಎದ್ದಿದ್ದು ನಿತ್ಯ ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿವೆ.

ತಾಲೂಕಿನ ವಿವಿಧ ಗ್ರಾಮಗಳಿಂದ ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ಸಂಪಕಿರ್ಸುವ ಪ್ರಮುಖ ರಸ್ತೆ ಇದಾಗಿದೆ. ಕಳ್ಳಿಹಾಳ, ಭೂ ವೀರಾಪೂರ, ಕಾಟೇನಹಳ್ಳಿ, ಹನುಮನಹಳ್ಳಿ, ಕನವಳ್ಳಿ, ಭರಡಿ, ಕೂರಗುಂದ, ರಾಣೆಬೆನ್ನೂರ ತಾಲೂಕಿನ ಹನುಮಾಪೂರ, ಹನುಮಾಪೂರ ತಾಂಡೆ, ಬ್ಯಾಡಗಿ ತಾಲೂಕಿನ ಕೆಂಗೊಂಡ, ಕಲ್ಲೇದೇವರು, ಅರಬಗೊಂಡ, ಕದಮನಹಳ್ಳಿ, ಗುಂಡೇನಹಳ್ಳಿ ಸೇರಿ ಪ್ರಮುಖ ಗ್ರಾಮಗಳ ಜನರು ನಿತ್ಯ ಹಾವೇರಿಗೆ ಬರಲು ಇದೇ ಮಾರ್ಗ ಅವಲಂಬಿಸಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ರೈಲ್ವೆ ಇಲಾಖೆಯವರು ಕೆಳ ಸೇತುವೆ ನಿಮಿರ್ಸಿ ಓಡಾಡಲಿಕ್ಕೆ ಅನುಕೂಲ ಕಲ್ಪಿಸಿ ಕೊಟ್ಟಿದ್ದಾರೆ. ಕೆಳ ಸೇತುವೆ ನಿಮಾರ್ಣ ಮಾಡುವಾಗ ರಸ್ತೆಯಲ್ಲಿ ಕಳಪೆ ಸಾಮಗ್ರಿಗಳನ್ನು ಬಳಸಿದ್ದರ ಪರಿಣಾಮವಾಗಿ ಒಂದೂವರೆ ವರ್ಷದೊಳಗೆ ಸಂರ್ಪೂಣ ಕಾಂಕ್ರೀಟ್​ ಕಿತ್ತು ಹೋಗಿದ್ದು, ರಸ್ತೆಗೆ ಹಾಕಲಾಗಿದ್ದ ಕಬ್ಬಿಣದ ರಾಡ್​ಗಳು ಎದ್ದು ನಿಂತಿವೆ.

ನಿತ್ಯ ಸಂಚರಿಸುವ ಬೈಕ್​, ಆಟೋ ರಿಕ್ಷಾ, ಕಟಮಾ, ಟಾಟಾಏಸ್​, ಕಾರು, ಬಸ್​ ಸೇರಿದಂತೆ ಇತರ ವಾಹನಗಳ ಚಕ್ರಗಳಿಗೆ ಕಬ್ಬಿಣದ ರಾಡ್​ಗಳು ಸಿಲುಕಿಕೊಂಡು ಸವಾರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿವೆ. ಅಲ್ಲದೆ ಕಬ್ಬಿಣದ ರಾಡ್​ಗಳ ಚೂರು, ನಟ್​ಬೋಲ್ಟ್​ಗಳು ವಾಹನ ಗಾಲಿಗೆ ಚುಚ್ಚಿ ಅನೇಕ ಬೈಕ್​ ಸವಾರರು, ಕಾರು ಚಾಲಕರು, ಟ್ರಾ$್ಯಕ್ಟರ್​ ಚಾಲಕರು ಪಂಚರ್​ ಮಾಡಿಕೊಂಡು ತಮ್ಮ ತಮ್ಮ ವಾಹನಗಳನ್ನು ತಳ್ಳಿಕೊಂಡು ಹೋಗಿದ್ದಾರೆ.

ಕಾಂಕ್ರೀಟ್​ ಕಿತ್ತು ಹೋಗಿ ಅಲ್ಲಲ್ಲಿ ತಗ್ಗು ಗುಂಡಿಗಳು ಬಿದ್ದಿರುವ ಕಾರಣಕ್ಕೆ ವಾಹನ ಸವಾರರು ಅಪಾಯದ ಭೀತಿಯಲ್ಲಿ ಸಂಚರಿಸುವಂತಾಗಿದೆ. ಇನ್ನೂ ಮಳೆ ಬಂದರಂತೂ ದೇವರೇ ಕಾಪಾಡಬೇಕು. ಗುಂಡಿಯೊಳಗೆ ನೀರು ನಿಂತುಕೊಂಡು ವಾಹನ ಸವಾರರು ಪರದಾಡುವಂತಾಗಿದೆ. ಕೆಳಸೇತುವೆ ಬಳಿ ನೀರು ಇಂಗಿಸಿಕೊಳ್ಳಲು ನಿಮಿರ್ಸಿದ ಮ್ಯಾನ್​ಹೋಲ್​ ಮಾದರಿಯ ಕಬ್ಬಿಣದ ಪಾಥ್​ ಕೂಡ ಹಾಳಾಗಿ ಗುಂಡಿಯೊಳಗೆ ಸಿಲುಕಿದೆ.

ಹಗಲು ಹೊತ್ತಿನಲ್ಲಿ ಹೇಗೋ ನೋಡಿಕೊಂಡು ಹೋಗಬಹುದು. ಆದರೆ ರಾತ್ರಿ ವೇಳೆಯಂತೂ ಓಡಾಡಲಿಕ್ಕೆ ಬಹಳ ತೊಂದರೆಯಾಗಿದೆ. ಇನ್ನೂ ಅಪರಿಚಿತರಿಗೂ ಕೂಡ ರಸ್ತೆ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ರೈಲ್ವೆ ಕೆಳ ಸೇತುವೆ ಬಳಿ ಹಾಳಾದ ರಸ್ತೆಯ ದುರಸ್ತಿ, ನೀರು ನಿಲ್ಲದಂತೆ ಮುನ್ನೆಚ್ಚರಿಕೆ, ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net