ಅನ್ ರಿಜಿಸ್ಟ್ರಾರ್ ಜಿಪಿಎಗೆ ಕಿಮ್ಮತ್ತಿಲ್ಲ

KBG
Published on

ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಥಿರಾಸ್ತಿಗಳ ಕ್ರಯ ಪತ್ರ ನೋಂದಣಿ ಮಾಡುವಾಗ ಅನ್ ರಿಜಿಸ್ಟ್ರಾರ್ ಜಿಪಿಎ (ಜನರಲ್ ಪವರ್ ಆ್ ಅಟಾರ್ನಿ) ಪರಿಗಣಿಸದಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ವಿಧಾನಸಭೆಯಲ್ಲಿ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ 2025 ಪರ್ಯಾಲೋಚನೆ ನಡೆದು ಅನುಮೋದನೆ ದೊರೆತಿದೆ.

ಈ ವೇಳೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ನೋಂದಣಿ ಆಗದ ಜಿಪಿಎ ಮೇಲೆ ಕ್ರಯ ಪತ್ರಗಳನ್ನು ನೋಂದಣಿ ಮಾಡಲಾಗುತ್ತಿದೆ. ಇದರಿಂದ ಯಾರದ್ದೋ ಜಮೀನನ್ನು ಮತ್ಯಾರೋ ಕಬಳಿಸುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶಕ್ಕೆ ನೋಂದಣಿ ಆಗದ ಜಿಪಿಎಯನ್ನು ಕ್ರಯ ಪತ್ರಗಳ ರಿಜಿಸ್ಟ್ರೇಷನ್‌ಗೆ ಬಳಸದಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆದರೆ, ರಕ್ತ ಸಂಬಂಧಿಕರು ವಿಲ್, ದಾನ ಪತ್ರಗಳಿಗೆ ಇದು ಅನ್ವಯ ಆಗುವುದಿಲ್ಲ ಎಂದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್, ಈಗಾಗಲೇ ನೋಂದಣಿಯಾಗದ ಜಿಪಿಎ ಇಟ್ಟುಕೊಂಟು ಸೈಟ್ ಖರೀದಿಸಿದವರು ಮತ್ತು ಮನೆ ಕಟ್ಟಿಕೊಂಡವರಿಗೆ ಅವಕಾಶ ನೀಡಬೇಕೆಂದರು. ಇದೇ ವೇಳೆ ಶಾಸಕ ಎಸ್. ಆರ್.ವಿಶ್ವನಾಥ್, ಹಿಂದಿನ ಜಿಪಿಎಗಳಿಗೆ ಅವಕಾಶ ಕೊಟ್ಟರೇ ಅಕ್ರಮ ನಡೆಯುವ ಸಾಧ್ಯತೆ ಇರುವುದಾಗಿ ಎಚ್ಚರಿಸಿದರು. ಅದಕ್ಕೆ ಉತ್ತರಿಸಿದ ಕೃಷ್ಣಬೈರೇಗೌಡ, ಕಾನೂನು ಇಲಾಖೆ ಜತೆಗೆ ಚರ್ಚೆ ನಡೆಸಿ ಕಾಯ್ದೆ ರೂಪಿಸುವುದಾಗಿ ಸ್ಪಷ್ಟತೆ ನೀಡಿದರು.

ಇನ್ನು ಮುಂದೆ ಸರ್ಕಾರದಿಂದ 94ಸಿ, 94ಸಿಸಿಯಲ್ಲಿ ಮಂಜೂರು ಆಗುವ ಸೈಟು, ಜಮೀನುಗಳ ಹಕ್ಕು ಪತ್ರಗಳು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಕಡ್ಡಾಯ ಮಾಡಲಾಗಿದೆ. ಕಳೆದು ಹೋದರೆ ಅಥವಾ ನಕಲಿ ತಡೆಗಟ್ಟಲು ಅನುಕೂಲವಾಗಲಿದೆ. ಸ್ಥಿರಾಸ್ತಿಗಳ ಮೇಲೆ ಸಾಲ ಮಂಜೂರು ಮಾಡುವ ರಾಷ್ಟ್ರೀಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‌ಗಳು ಇಸಿ (ಋಣಭಾರ) ಸೃಷ್ಟಿಸಲು ಅಥವಾ ಸಾಲಗಾರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರಬೇಕಿಲ್ಲ. ಬದಲಿಗೆ ಬ್ಯಾಂಕ್ ಅಧಿಕಾರಿಗಳೇ ೇಸ್‌ಲೆಸ್ ಮತ್ತು ರಿಮೋಟ್ ಸಿಸ್ಟಮ್‌ನಲ್ಲಿ ಇಸಿ ಸೃಜನೆ ಮಾಡಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಭೂ ಕಬಳಿಕೆ ಕೋರ್ಟ್‌ಗೆ ಮಧ್ಯಪ್ರವೇಶವಿಲ್ಲ

ಇದೇ ವೇಳೆ ಕರ್ನಾಟಕ ಭೂ ಕಬಳಿಕೆ ನಿಷೇಧ(ತಿದ್ದುಪಡಿ) ವಿಧೇಯಕಕ್ಕೆ ತಿದ್ದುಪಡಿ ತರಲಾಯಿತು. ಈ ಬಗ್ಗೆ ವಿವರಿಸಿದ ಕೃಷ್ಣಬೈರೇಗೌಡ, ಸರ್ಕಾರಿ ಜಮೀನು ರಕ್ಷಣೆ ಮಾಡುವ ಅಧಿಕಾರ ಜಿಲ್ಲಾಡಳಿತಕ್ಕೆ ವಹಿಸಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಸಾಕಷ್ಟು ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಆಗಿದ್ದರೇ ಅದನ್ನು ತೆರವು ಕಾರ್ಯಾಚರಣೆ ವೇಳೆ ತಡೆ ಕೋರಿ ಅರ್ಜಿ ಬಂದರೇ ಭೂ ಕಬಳಿಕೆ ನ್ಯಾಯಾಲಯ ಸ್ವೀಕರಿಸುವ ಅಧಿಕಾರ ಇಲ್ಲ. ತೆರವು ಕಾರ್ಯಾಚರಣೆ ಪೂರ್ಣಗೊಂಡು ಸರ್ಕಾರದ ವಶಕ್ಕೆ ಬಂದ ಮೇಲೆ ಅರ್ಜಿ ಸಲ್ಲಿಸಬಹುದಷ್ಟೇ ಎಂದರು.

ಖಾಸಗಿ ರಸ್ತೆ ಸರ್ಕಾರದ್ದು

ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2025 ಪರ್ಯಾಲೋಚಿಸಿ ಅಂಗೀಕರಿಸಲಾಯಿತು. ಈ ಬಗ್ಗೆ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಖಾಸಗಿ ರಸ್ತೆಗಳನ್ನು ಸರ್ಕಾರಿ ರಸ್ತೆ ಎಂದು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net