

ಕೋಲಾರ: ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ.ವಿ.ದಯಾನಂದ ಹಾಗೂ ಉಪಾಧ್ಯಕ್ಷರಾಗಿ ಎಂ.ವಿ.ಮಂಜುನಾಥ್ ಅವರು ಅವಿರೋಧ ಆಯ್ಕೆಯಾದರು.
ಸೊಸೈಟಿ ಕಚೇರಿಯಲ್ಲಿ ಗುರುವಾರ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಕೆ.ವಿ.ದಯಾನಂದ ಅವರು 4ನೇ ಬಾರಿಗೆ ಅಧ್ಯಕ್ಷರಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಲಿತಾಂಶ ಘೋಷಿಸಿದರು.
ಸಂದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ಪ್ರಕ್ರಿಯೆ ಮುಗಿದು 11 ಮಂದಿ ಅವಿರೋಧ ಹಾಗೂ ಒಬ್ಬರು ಚುನಾವಣೆ ಮೂಲಕ 12 ಮಂದಿ ಆಯ್ಕೆಯಾಗಿದ್ದರು.
ಅಧ್ಯಕ್ಷ ಕೆ.ವಿ.ದಯಾನಂದ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಸಹಕಾರ ಸಂಗಳು ಆರ್ಥಿಕವಾಗಿ ಬಲಿಷ್ಠವಾಗಿದ್ದರೆ ಮಾತ್ರ ರೈತರಿಗೆ, ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸಲು ಸಾಧ್ಯ ಎಂದು ಹೇಳಿದರು.
ಗ್ರಾಮದ ಸಂವನ್ನು ಉನ್ನತ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಸ್ಫೂರ್ತಿಯಾಗಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಾದರಿಯನ್ನಾಗಿ ಮಾಡು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿ ನಿರ್ದೇಶಕರೊಂದಿಗೆ ಚರ್ಚಿಸಿ ತೆಗೆದುಕೊಂಡು ತೀರ್ಮಾನಗಳಿಂದ ಜನರ ಮನೆಮಾತಾಗಿದೆ. 1,500 ಮೆಟ್ರಿಕ್ ಟನ್ ಪಡಿತರ ದಾಸ್ತಾನು ಮಾಡುವ ಗೋದಾಮು ನಿರ್ಮಾಣ ಮಾಡಲು ಸರ್ಕಾಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ನಬಾರ್ಡ್ ಬ್ಯಾಂಕ್ 5 ಕೋಟಿ ರೂ. ಸಾಲ ನೀಡಲು ಮುಂದೆ ಬಂದಿದೆ. ಜತೆಗೆ ಸಹಕಾರ ತರಬೇತಿ ಕೇಂದ್ರ ಸ್ಥಾಪನೆ ಮಾಡುವ ಆಲೋಚನೆಯಿದೆ ಎಂದು ತಿಳಿಸಿದರು.
ಕ್ಷೇತ್ರವನ್ನು ದಿ.ಬೈರೇಗೌಡರು ಪ್ರತಿನಿಧಿಸುತ್ತಿದ್ದರು. ಅವರ ಹಾದಿಯಲ್ಲಿ ಸಂವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಸೋಸೈಟಿ ಅಭಿವೃದ್ಧಿ ಗುರುತಿಸಿ ಅತ್ಯುತ್ತಮ ಸಹಕಾರ ಪ್ರಶಸ್ತಿ ಸಂದಿದೆ. ಕೊಡಗು ಡಿಸಿಸಿ ಬ್ಯಾಂಕಿನವರು ಅಧ್ಯಯನಕ್ಕಾಗಿ ಇಲ್ಲಿಗೆ ಬಂದಿದ್ದರು. ಈ ಮಟ್ಟಕ್ಕೆ ಸಂವು ಬೆಳೆಯಲು ಸಿಬ್ಬಂದಿ, ಆಡಳಿತ ಮಂಡಳಿಯ ಸಹಕಾರದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
2010ರಲ್ಲಿ ಸಂವು 19.50 ಲಕ್ಷ ರೂ. ನಷ್ಟದಲ್ಲಿತ್ತು, ಅಧಿಕಾರವಹಿಸಿಕೊಂಡ ನಂತರ ಹಂತಹಂತವಾಗಿ ಮೇಲೆತ್ತುವ ಕೆಲಸ ಮಾಡಿದ್ದೇವೆ. ಈ ಬಾರಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡದೆ ಚುನಾವಣೆ ನಡೆಸಿದ್ದೇವೆ. ಈಗಾಗಲೇ 19 ಕೋಟಿ ರೂ. ವಿವಿಧ ಸಾಲ ವಿತರಿಸಿದ್ದು, ಪ್ರಮಾಣಿಕವಾಗಿ ಪಾವತಿ ಮಾಡುತ್ತಿದ್ದಾರೆ. ಸ್ವಂತ ಬಂಡವಾಳದಿಂದ ಸಾಲ ನೀಡುವ ಶಕ್ತಿ ಹೊಂದಿದೆ ಎಂದು ಹೇಳಿದರು.
ನಿರ್ದೇಶಕರಾದ ರಮೇಶ್, ಕುರಗಲ್ ನಾರಾಯಣಮ್ಮ, ಸುಳದೇನಹಳ್ಳಿ ನಾರಾಯಣಮ್ಮ, ಮುನಿಕೃಷ್ಣ, ಎಂ.ಡೇವಿಡ್, ಕುಮಾರ ಆಚಾರಿ, ಎಂ.ಬೈಯಣ್ಣ, ಎಂ.ವಿ.ಮಂಜುನಾಥ, ಬಿ.ಎಂ.ರಾಮೇಗೌಡ, ಸಿ.ಡಿ.ರಾಮಚಂದ್ರ, ಸಿಇಒ ಮುನೀಶ್ವರಪ್ಪ, ನಾಗೇಶ್, ಪ್ರಶಾಂತ್ , ಮುಖಂಡರಾದ ದೇವರಾಜ್, ಸುರೇಶ್, ರಾಮೇಗೌಡ, ರಾಜಣ್ಣ, ಲಕ್ಷ್ಮಣ್ ಹಾಜರಿದ್ದರು.