ದೇಶಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಅವಿರೋಧ ಆಯ್ಕೆ

20M.D.R.4
ಮದ್ದೂರು ತಾಲೂಕಿನ ದೇಶಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತರಾದ ಕೆ.ಸತೀಶ್, ಉಪಾಧ್ಯಕ್ಷೆಯಾಗಿ ಶಿವನಂಜಮ್ಮ ಅವಿರೋಧವಾಗಿ ಆಯ್ಕೆಯಾದರು. ದೇಶಹಳ್ಳಿ ಆರ್.ಮೋಹನ್‌ಕುಮಾರ್, ಬಿ.ಎಂ.ಮಹಾಲಿಂಗಯ್ಯ, ಎ.ಶಂಕರಪ್ಪ, ತಮ್ಮಣ್ಣ, ಸಿ.ಶಿವರಾಮು, ರತ್ನಮ್ಮ, ಬಿ.ಸಿ.ಜಯರಾಮು, ಲತಾ ಇದ್ದರು.
Published on

ಮದ್ದೂರು: ತಾಲೂಕಿನ ದೇಶಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತರಾದ ಕೆ.ಸತೀಶ್, ಉಪಾಧ್ಯಕ್ಷೆಯಾಗಿ ಶಿವನಂಜಮ್ಮ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕೆ ಕೆ.ಸತೀಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವನಂಜಮ್ಮ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಕೆ.ಸತೀಶ್, ಉತ್ಪಾದಕರು ಸಹಕಾರ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡವುದರ ಜತೆಗೆ ಸಂಘದ ಶ್ರೇಯೋಭಿವೃದ್ಧಿಗಾಗಿ ಆಡಳಿತ ಮಂಡಳಿ ಜತೆಗೆ ಕೈ ಜೋಡಿಬೇಕೆಂದು ಕೋರಿದರು.

ಒಕ್ಕೂಟವು ಉತ್ಪಾದಕರಿಗೆ ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಇದರ ಸದ್ಬಳಕೆಗೆ ಮುಂದಾಗಿ ಆರ್ಥಿಕ ಸ್ವಾಲವಂಬಿ ಬದುಕನ್ನು ರೂಪಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅದರಲ್ಲೂ ಮಹಿಳೆಯರು ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸಿ ಸ್ವಾವಲಂಬಿ ಬದುಕನ್ನು ರೂಪಿಸಿಕೊಂಡಿರುವುದು ಮೆಚ್ಚುಗೆಯ ವಿಷಯ ಎಂದರು.

ಉತ್ಪಾದಕರಿಗೆ ಸಂಘದ ವತಿಯಿಂದ ಕಾಲ ಕಾಲಕ್ಕೆ ರಾಸು ಮಿಮೆ, ಜಾನುವಾರುಗಲಿಗೆ ಕಾಲು-ಬಾಯಿ ಜ್ವರದ ಲಸಿಕೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಜತೆಗೆ ಕಾಲ ಕಾಲಕ್ಕೆ ಪಶು ಆಹಾರ, ಉತ್ಪಾದಕರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ರೈತ ನಿಧಿ ಯೋಜನೆಯಡಿ ಹಲವು ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಸಂಘದ ನಿರ್ದೇಶಕದರಾದ ಬಿ.ಎಂ.ಮಹಾಲಿಂಗಯ್ಯ, ಎ.ಶಂಕರಪ್ಪ, ತಮ್ಮಣ್ಣ, ಸಿ.ಶಿವರಾಮು, ರತ್ನಮ್ಮ, ಬಿ.ಸಿ.ಜಯರಾಮು, ಲತಾ, ಲಕ್ಷ್ಮೀ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿಆರ್.ಮೋಹನ್‌ಕುಮರ್, ಮುಖಂಡರಾದ ಡಿ.ಪಿ.ಮಹೇಶ್, ತಗಡೇಗೌಡ್ರು, ಶಿವಣ್ಣ, ಎಂ.ದ್ಯಾವಪ್ಪ, ಬಿ.ಆರ್.ರಾಜಶೇಖರ್, ಡಿ.ಕೆ.ಅಶೋಕ್, ಸತೀಶ್, ದಾಸಪ್ಪ, ಕುಮಾರ್, ಮಾದು, ಶಿವಣ್ಣ, ಸುಧೀರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net