

ರಾಣೆಬೆನ್ನೂರ: ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅನಧಿಕೃತ ಲೇಔಟ್ ನಿರ್ಮಾಣ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬುಧವಾರ ಇಲ್ಲಿಯ ಸಾರ್ವಜನಿಕರು ಗ್ರೇಡ್&2 ತಹಸೀಲ್ದಾರ್ ರು ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ಲೇಔಟ್ ನಿರ್ಮಾಣ ಮಾಡುತ್ತಿರುವವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ.
ನಗರದ ಸರ್ವೆ ನಂ.404/3 ಸೇರಿ ಇತರ ಕಡೆಗಳಲ್ಲಿ ಹಾಗೂ ಗ್ರಾಮೀಣ ಭಾಗದ ಕೂನಬೇವು, ಹೂಲಿಹಳ್ಳಿ, ಕಮದೋಡ, ಮಾಗೋಡ ಮತ್ತು ಗಂಗಾಜಲ ತಾಂಡಾದ ಅಕ್ಕಪಕ್ಕ ಮೇಡ್ಲೇರಿ, ಅರೇಮಲ್ಲಾಪುರ, ಹಲಗೇರಿ ಗ್ರಾಮಗಳ ಹೊರವಲಯದ ಲವಾತ್ತಾದ ಭೂಮಿಯಲ್ಲಿ ಅಕ್ಕ ಪಕ್ಕದ ರೈತರ ವಿರೋಧವಿದ್ದರೂ ಅನಧಿಕೃತವಾಗಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ.
ಅಲ್ಲದೆ ಚಿದಂಬರ ನಗರ, ಸಿದ್ದಾರೂಢ ನಗರ, ಕಮಲಾ ನಗರ, ಅಲ್ತಾ್ ನಗರಗಳಲ್ಲಿ ಚಿದಂಬರ ನಗರ, ಕಮಲಾ ನಗರ, ಅಲ್ತಾ್ ನಗರಗಳಲ್ಲಿ ಈಗಾಗಲೇ ನಿಮಿರ್ಸಿರುವ ಲೇಔಟ್ಗಳಲ್ಲಿ ಮನೆ ನಿಮಿರ್ಸಿಕೊಂಡಿರುವ ಜನತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಹೀಗಾಗಿ ಇಲ್ಲಿನ ಜನತೆ ಮೂಲಭೂತ ಸೌಲಭ್ಯಗಳಿಗಾಗಿ ನಗರಸಭೆಗೆ ಅಲೆದಾಡುವಂತಾಗಿದೆ. ಸರ್ಕಾರದ ಆದಾಯವನ್ನು ಕುಂಟಿತಗೊಳಿಸಿ ಕೋಟಿಗಟ್ಟಲೆ ಸರ್ಕಾರದ ಬೊಕ್ಕಸಕ್ಕೆ ಅನ್ಯಾಯ ಮಾಡುತ್ತಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಹೋದರೆ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ದೊಡ್ಡಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಯಲ್ಲಪ್ಪ ಚಿಕ್ಕಣ್ಣನವರ, ರಾಜು ಮಾದಮ್ಮನವರ, ಸಂತೋಷ ಮುದ್ದಿ, ಮಂಜಪ್ಪ ಗಂಜಾಮದ, ಶಂಕ್ರಪ್ಪ ಕೆಂಪಳ್ಳೆರ, ಭೋಜಪ್ಪ ಮುದ್ದಿ, ಕಿರಣ ಗುಳೇದ, ನಾಗಪ್ಪ ಕೆ., ಬಸವರಾಜ ಬಿದರಿ, ನಾಗರಾಜ ಪೂಜಾರ ಮತ್ತಿತರರಿದ್ದರು.