

ಬೆಂಗಳೂರು: ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಿಲಿಂದ್ ಗೌತಮ್ ನಾಯಕನಾಗಿ ಹಾಗೂ ರೇಚಲ್ ಡೇವಿಡ್ ನಾಯಕಿಯಾಗಿ ಅಭಿನಯಿಸುತ್ತಿರುವ ಚಿತ್ರ ‘ಅನ್‌ಲಾಕ್ ರಾಘವ’.
ಇತ್ತೀಚೆಗಷ್ಟೆ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬಿಜಿಯಾಗಿದೆ. ಚಿತ್ರದಲ್ಲಿ ನಾಲ್ಕೂವರೆ ೈಟ್ ಸನ್ನಿವೇಶಗಳಿದ್ದು, ಅರ್ಧ ೈಟ್ ಒಂದು ಹಾಡಿನಲ್ಲಿ ಬರುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ಬಗ್ಗೆ ನಿರ್ದೇಶಕ ದೀಪಕ್, ‘ಚಿತ್ರಕತೆ ಬರೆಯುವಾಗ ಈ ಸನ್ನಿವೇಶ ಸೇರಿಸಿರಲಿಲ್ಲ. ಬಳಿಕ ಇದನ್ನು ಸೇರಿಸಿದಾಗ ಈ ಸೀಕ್ವೆನ್ಸ್ ಚೆನ್ನಾಗಿ ಮೂಡಿಬಂತು. ಡಬ್ಬಿಂಗ್ ವೇಳೆ ಇದನ್ನು ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ಈ ಹಾಡು ಸಿನಿಮಾದ ಟ್ರಂಪ್ ಕಾರ್ಡ್ ಆಗಲಿದೆ. ಅನೂಪ್ ಸೀಳಿನ್ ಸಂಗೀತವಿರುವ ಈ ಹಾಡಿಗೆ ‘ವರಾಹ ರೂಪಂ’ ಖ್ಯಾತಿಯ ಸಾಯಿ ವ್ನಿೇಶ್ ಕಂಠದಾನ ಮಾಡಿದ್ದಾರೆ. ಮುರಳಿ ಮಾಸ್ಟರ್ ಹಾಗೂ ಧನಂಜಯ್ ಮಾಸ್ಟರ್ ನೃತ್ಯ ಸಂಯೋಜಿಸಿದರೆ, ವಿನೋದ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ ಮಾಡಿದ್ದಾರೆ’ ಎಂದು ಹೇಳಿದ್ದಾರೆ.
ಇನ್ನು ಮಿಲಿಂದ್, ರೇಚಲ್ ಜತೆ ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಭೂಮಿ ಶೆಟ್ಟಿ, ಮೂಗು ಸುರೇಶ್, ಪ್ರಮುಖ ತಾರಾಬಳಗದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಜತೆಗೆ ಲವಿತ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನವಿರಲಿದೆ.