ಕುವೆಂಪು ವಿವಿಗೆ ಜಾಗತಿಕ ಮನ್ನಣೆ; ಸೈಮ್ಯಾಗೋ ಪಟ್ಟಿಯಲ್ಲಿ 56ನೇ ಸ್ಥಾನ ಪಡೆದ ವಿವಿ

10 smg 13
Published on

ಶಿವಮೊಗ್ಗ: ಉನ್ನತ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಸಂಸ್ಥೆಗಳ ಜಾಗತಿಕ ರ‌್ಯಾಂಕಿಂಗ್ ನಿರ್ಧರಿಸುವ ಸೈಮ್ಯಾಗೋ ಪಟ್ಟಿಯಲ್ಲಿರುವ ದೇಶದ ವಿವಿಗಳ ಪೈಕಿ ಕುವೆಂಪು ವಿವಿ 56ನೇ ಸ್ಥಾನ ಪಡೆದಿದೆ. ಕಳೆದ ವರ್ಷ 66ನೇ ಸ್ಥಾನದಲ್ಲಿದ್ದ ವಿವಿ ಈಗ ತನ್ನ ಸಾಧನೆಯನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡಿದೆ.

ಸಂಶೋಧನಾ ಮಾನದಂಡದಲ್ಲಿ 41ನೇ ಸ್ಥಾನ, ನಾವೀನ್ಯತೆಯಲ್ಲಿ 38ನೇ ಸ್ಥಾನ ಮತ್ತು ಸಾಮಾಜಿಕ ಪ್ರಭಾವ ಮಾನದಂಡದಲ್ಲಿ 26ನೇ ಸ್ಥಾನ ಲಭಿಸಿದ್ದು, ಸಮಗ್ರವಾಗಿ 56ನೇ ಸ್ಥಾನ ದೊರೆತಿದೆ. ಸೈಮ್ಯಾಗೋ ಸಂಸ್ಥೆಯ ಜಾಗತಿಕ ಮಟ್ಟದಲ್ಲಿ ಸರ್ಕಾರಿ, ಖಾಸಗಿ, ಆರೋಗ್ಯ, ಉನ್ನತ ಶಿಕ್ಷಣ ಮತ್ತು ಸರ್ಕಾರೇತರ ಕ್ಷೇತ್ರಗಳ ವಿಭಾಗಗಳಲ್ಲಿ 7,533 ಸಂಸ್ಥೆಗಳನ್ನು ಒಳಗೊಂಡ ಸಮಗ್ರ ರ‌್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ.

ಜಾಗತಿಕ ವಿವಿಗಳ ಸಮಗ್ರ ರ‌್ಯಾಂಕಿಂಗ್‌ನಲ್ಲಿ ಕುವೆಂಪು ವಿವಿ 569ನೇ ಸ್ಥಾನ ಗಳಿಸಿದೆ. ಏಷ್ಯಾ ವಲಯದ 1,437 ವಿವಿಗಳ ಪೈಕಿ 303ನೇ ಸ್ಥಾನ ದೊರೆತಿದೆ. ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಮೊದಲ ಸ್ಥಾನ, ಮಣಿಪಾಲ ವಿವಿ 15, ಜೈನ್ ವಿವಿ 48 ಹಾಗೂ ಯೇನಪೋಯ ವಿವಿ 49ನೇ ಸ್ಥಾನದಲ್ಲಿವೆ.

ಮೊದಲ ಸ್ಥಾನ:

ಸೈಮ್ಯಾಗೋ ರ‌್ಯಾಂಕಿಂಗ್‌ನಲ್ಲಿ ರಾಜ್ಯದ ಸಾಂಪ್ರದಾಯಿಕ ವಿವಿಗಳ ಪೈಕಿ ಕುವೆಂಪು ವಿವಿ 56ನೇ ರ‌್ಯಾಂಕಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು ವಿವಿ (60), ಮೈಸೂರು ವಿವಿ(80, ಕರ್ನಾಟಕ ವಿವಿ(110) ಹಾಗೂ ಮಂಗಳೂರು ವಿವಿ 112ನೇ ಸ್ಥಾನದಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net