ಮಾಸ್ಕ್​ ತಯಾರಿಕೆಗೆ ಜಪಾನ್​ನಲ್ಲಿ ಒಳ ಉಡುಪು ಬಟ್ಟೆ ಬಳಕೆ ಮಾಡ್ತಾರಂತೆ!

japan uni
Published on

ಟೊಕಿಯೋ: ಕರೊನಾ ವೈರಸ್​ ಪ್ರಸರಣ ತಡೆಯಲು ಅಗತ್ಯವಾಗಿರುವ ಮಾಸ್ಕ್​ ಜಪಾನ್​ನಲ್ಲಿ ಕೊರತೆಯಾಗಿರುವುದರಿಂದ ವಾಯುಯಾನದ ಒಳ ಉಡುಪು ತಯಾರಿಕೆಗೆ ಬಳಸುವ ಬಟ್ಟೆಯಿಂದ ಮಾಸ್ಕ್​ ತಯಾರಿಸಲು ಸರ್ಕಾರ ಸೂಚಿಸಿದೆ.

ವಾಯುಯಾನದ ಒಳ ಉಡುಪುಗಳನ್ನು ತಯಾರಿಸುವ ಯುನಿಕ್ಲೊ ಕಂಪನಿ ಒಳ ಉಡುಪಿಗೆ ಬಳಕೆ ಮಾಡುವ ಬಟ್ಟೆಯಿಂದ ಮಾಸ್ಕ್​ ತಯಾರಿಸುವುದಾಗಿ ಘೋಷಿಸಿದೆ.

ಒಳ ಉಡುಪು ತಯಾರಿಸಲು ಬಳಸುವ ಬಟ್ಟೆ ಉತ್ಕೃಷ್ಟವಾದ ರೇಷ್ಮೆದಾರಗಳಿಂದ ಕೂಡಿದೆ. ಈ ಬಟ್ಟೆ ಚಳಿಗಾಲದಲ್ಲಿ ಬೆಚ್ಚಗಿನ ಅನುಭವ ಹಾಗೂ ಬೇಸಿಗೆಯಲ್ಲಿ ತಂಪು ಅನುಭವ ನೀಡುವುದರಿಂದ ವಿಮಾನಯಾನದ ಒಳ ಉಡುಪುಗಳಿಗಾಗಿ ಮಾತ್ರ ಬಳಸಲಾಗುತ್ತಿತ್ತು.

ಕರೊನಾ ವೈರಸ್​ ಹಾವಳಿಯಿಂದ ಮಾಸ್ಕ್​ಗಳು ಕೊರತೆಯಾಗಿತ್ತು. ಅಲ್ಲದೆ ಉತ್ಕೃಷ್ಟ ದರ್ಜೆಯ ಮಾಸ್ಕ್​ಗಳು ಇಲ್ಲದ ಹಿನ್ನೆಲೆಯಲ್ಲಿ ಕಂಪನಿ ಈಗ ಮಾಸ್ಕ್​ ತಯಾರಿಸಲು ಮುಂದಾಗಿದೆ.

ಶೀಘ್ರದಲ್ಲೇ ಮಾಸ್ಕ್​ಗಳು ಮಾರುಕಟ್ಟೆಗೆ ಬಿಡುಗಡೆಯಾಲಿದೆ. ದರವನ್ನು ಕೂಡ ಕಂಪನಿ ಶೀಘ್ರವೇ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net